ವಿಕ್ಟೋರಿಯಾ ಆಸ್ಪತ್ರೆ ಸಿಬ್ಬಂದಿ ಎಡವಟ್ಟು, ರಾಮನಗರದಲ್ಲಿ ಆತಂಕ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.30- ವಿಕ್ಟೋರಿಯಾ ಆಸ್ಪತ್ರೆ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ರಾಮನಗರದಲ್ಲಿ ಆತಂಕ ಶುರುವಾಗಿದೆ. ರಾಮನಗರ ಮೂಲದ ಮಹಿಳೆಯೊಬ್ಬರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಗಂಟಲು ದ್ರವ ಪರೀಕ್ಷೆ ಮಾಡಿಸಿಕೊಂಡಿದ್ದರು.

ಲ್ಯಾಬ್ ವರದಿಯಲ್ಲಿ ನೆಗಟಿವ್ ರಿಪೋರ್ಟ್ ಬಂದ ಹಿನ್ನೆಲೆಯಲ್ಲಿ ಮಹಿಳೆ ರಾಮನಗರಕ್ಕೆ ಹಿಂತಿರುಗಿ ದಿನ ನಿತ್ಯದ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.

ಎರಡು ದಿನಗಳ ನಂತರ ಮಹಿಳೆಗೆ ದೂರವಾಣಿ ಕರೆ ಮಾಡಿದ ಬಿಬಿಎಂಪಿ ಸಿಬ್ಬಂದಿಯವರು ನಿಮಗೆ ಪಾಸಿಟಿವ್ ಬಂದಿದೆ. ನೀವು ಆಸ್ಪತ್ರೆಗೆ ದಾಖಲಾಗಬೇಕು. ನಿಮ್ಮ ಮನೆಯ ವಿಳಾಸ ನೀಡಿ ಎಂದು ಹೇಳಿದಾಗ ಮಹಿಳೆ ಕಂಗಾಲಾಗಿದ್ದಾರೆ.

ಲ್ಯಾಬ್‍ನವರ ಎಡವಟ್ಟಿನಿಂದ ನೆಗಟಿವ್ ರಿಪೋರ್ಟ್ ಬಂದ ಕಾರಣ ಆಕೆ ತಮ್ಮ ಕುಟುಂಬದವರ ಜೊತೆ ರಾಮನಗರದಲ್ಲೆಲ್ಲ ಸುತ್ತಾಡಿದ್ದಾರೆ.

ಇದೀಗ ಮಹಿಳೆಗೆ ಪಾಸಿಟಿವ್ ಎಂದು ತಿಳಿಯುತ್ತಿದ್ದಂತೆ ಆಕೆಯ ಕುಟುಂಬ ವರ್ಗದವರು ಹಾಗೂ ರಾಮನಗರ ಜನತೆ ಕಂಗಾಲಾಗಿದ್ದಾರೆ.

Facebook Comments