ಅನುಕಂಪದ ಆಧಾರದ ಹುದ್ದೆ ನೀಡಲು ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮಾ.22- ಅನುದಾನಿತ ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವಾಗ ಮರಣ ಹೊಂದಿದ ಸಂದರ್ಭದಲ್ಲಿ ಅವರ ಕುಟುಂಬದ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ಹುದ್ದೆ ನೀಡಬೇಕೆಂದು ವಿಧಾನಪರಿಷತ್‍ನಲ್ಲಿ ಒತ್ತಾಯಿಸಲಾಯಿತು.

ವಿಧಾನಪರಿಷತ್‍ನಲ್ಲಿ ಬಿಜೆಪಿ ಸದಸ್ಯ ಅರುಣ್ ಶಹಪುರ್ ಅವರು ಕೇಳಿದ ಪ್ರಶ್ನೆ ಅನುಕಂಪದ ಆಧಾರದಲ್ಲಿ ಹುದ್ದೆ ನೀಡುವಂತೆ ಕೇಳಿದಾಗ, ಅದಕ್ಕೆ ಉತ್ತರಿಸಿದ ಉನ್ನತ ಶಿಕ್ಷಣ ಸಚಿವ ಹಾಗೂ ಡಿಸಿಎಂ ಅಶ್ವಥ್ ನಾರಾಯಣ ಅವರು, ನಿಯಮಾವಳಿಗಳಲ್ಲಿ ಇದಕ್ಕೆ ಅವಕಾಶವಿಲ್ಲ ಎಂದರು. ನಿಯಮಗಳನ್ನು ನಾವು ರೂಪಿಸುತ್ತೇವೆ. ಅಗತ್ಯ ಬಂದರೆ ಕಾನೂನು ತಿದ್ದುಪಡಿ ಎಂದು ಶಹಪುರ ಒತ್ತಾಯಿಸಿದರು.

2001ಕ್ಕಿಂತ ಪೂರ್ವದಲ್ಲಿ ನೇಮಕಾತಿಯಾದವರು ಅಕಾಲಿಕ ನಿಧನಕ್ಕೀಡಾದರೆ ಅವರ ಕುಟುಂಬದ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ಕೆಲಸ ನೀಡಲು ಅವಕಾಶವಿತ್ತು.
ಆದರೆ ಈಗ ಆ ನಿಯಮ ತಿದ್ದುಪಡಿಯಾಗಿದೆ ಎಂದು ಸಚಿವರು ಹೇಳಿದಾಗ, ಸಭಾಪತಿಯವರು ಮಧ್ಯಪ್ರವೇಶಿಸಿ, ಹಿಂದಿನ ವ್ಯವಸ್ಥೆಯನ್ನೇ ಜಾರಿಗೆ ತರಲು ಪ್ರಯತ್ನಿಸಿ ಎಂದು ಸಲಹೆ ನೀಡಿದರು.

Facebook Comments