ಬಿಗ್ ಬ್ರೇಕಿಂಗ್ : ವಿಧಾನ ಪರಿಷತ್ ಚುನಾವಣೆಗೆ ಮಹೂರ್ತ ಫಿಕ್ಸ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.9- ಭಾರೀ ಮಹತ್ವ ಪಡೆದಿರುವ ವಿಧಾನಸಭೆಯಿಂದ ವಿಧಾನಪರಿಷತ್‍ನ ಏಳು ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ.

ವಿಧಾನಪರಿಷತ್ ಸದಸ್ಯರಾದ ನಾಜೀರ್ ಅಹಮ್ಮದ್, ಜಯಮ್ಮ, ಎಂ.ಸಿ.ವೇಣುಗೋಪಾಲ್, ಎನ್.ಎಸ್.ಬೋಸರಾಜ್, ಎಚ್.ಎಂ.ರೇವಣ್ಣ, ಟಿ.ಎ.ಶರವಣ ಹಾಗೂ ಡಿ.ಯು.ಮಲ್ಲಿಕಾರ್ಜುನ ಅವರು ಜೂ.30ರಂದು ನಿವೃತ್ತಿ ಯಾಗಲಿದ್ದು, ಇದರಿಂದ ತೆರವಾಗುವ ಏಳು ಸ್ಥಾನಗಳಿಗೆ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ.

ಇದೇ 11ರಂದು ಚುನಾವಣಾ ಅಸೂಚನೆ ಹೊರಡಲಿದ್ದು, ನಾಮಪತ್ರ ಸಲ್ಲಿಸಲು ಜೂ.18 ಕೊನೆ ದಿನವಾಗಿದೆ. ಜೂ.19ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, 22ರವರೆಗೂ ನಾಮಪತ್ರ ವಾಪಸ್‍ಗೆ ಕಾಲಾವಕಾಶವಿರುತ್ತದೆ. ಅಗತ್ಯಬಿದ್ದರೆ ಜೂ.29ರಂದು ಮತದಾನ ನಡೆಯಲಿದ್ದು, ಅಂದು ಸಂಜೆಯೇ ಫಲಿತಾಂಶ ಹೊರ ಬೀಳಲಿದೆ.

Facebook Comments

Sri Raghav

Admin