Saturday, April 20, 2024
Homeಇದೀಗ ಬಂದ ಸುದ್ದಿಲೋಕಸಭಾ ಚುನಾವಣೆ ನಂತರ ರಾಜ್ಯದಲ್ಲಿ ಮತ್ತೊಂದು ಮಿನಿ ಸಮರ

ಲೋಕಸಭಾ ಚುನಾವಣೆ ನಂತರ ರಾಜ್ಯದಲ್ಲಿ ಮತ್ತೊಂದು ಮಿನಿ ಸಮರ

ಬೆಂಗಳೂರು, ಏ.4- ಪ್ರಸಕ್ತ ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ರಾಜ್ಯದಲ್ಲಿ ಮತ್ತೊಂದು ಮಿನಿ ಮಹಾಸಮರ ನಡೆಯಲಿದೆ. ಜೂನ್ನಲ್ಲಿ 18 ವಿಧಾನಪರಿಷತ್ ಸದಸ್ಯ ಸ್ಥಾನಗಳು ತೆರವಾಗಲಿದ್ದು, ಆ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ವಿಧಾನಸಭೆಯಿಂದ ವಿಧಾನಪರಿಷತ್ನ 12 ಸ್ಥಾನಗಳಿಗೆ ಚುನಾವಣೆ ನಡೆಯಬೇಕಿದೆ.

ವಿಧಾನಪರಿಷತ್ ಸದಸ್ಯರಾಗಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ತೇಜಸ್ವಿನಿಗೌಡ ಅವರ ರಾಜೀನಾಮೆಯಿಂದ ಈಗಾಗಲೇ ಮೇಲ್ಮನೆ ಎರಡು ಸದಸ್ಯ ಸ್ಥಾನಗಳು ಖಾಲಿಯಿವೆ. ಮೇಲ್ಮನೆ ಸದಸ್ಯರಾದ ರಘುನಾಥ್ ರಾವ್ ಮಲ್ಕಾಪೂರೆ, ಡಾ.ಕೆ. ಗೋವಿಂದರಾಜ್, ಅರವಿಂದ ಕುಮಾರ್ ಅರಳಿ, ಕೆ.ಪಿ. ನಂಜುಂಡಿ ವಿಶ್ವಕರ್ಮ, ಬಿ.ಎಂ. ಫಾರೂಖ್, ಎನ್. ರವಿಕುಮಾರ್, ಎಸ್ ರುದ್ರೇಗೌಡ, ಕೆ. ಹರೀಶ್ಕುಮಾರ್, ಮುನಿರಾಜು ಗೌಡ ಪಿ.ಎಂ. ಹಾಗೂ ಸಚಿವ ಎನ್.ಎಸ್. ಬೋಸರಾಜು ಅವರು ಜೂ.17ರಂದು ನಿವೃತ್ತಿಯಾಗಲಿದ್ದಾರೆ. ಪದವಿ ಧರ ಕ್ಷೇತ್ರದಿಂದ ಆರ್. ದೇವೇಗೌಡ, ಡಾ. ಚಂದ್ರಶೇಖರ್ ಬಿ. ಪಾಟೀಲ್ ಜೂ.21 ರಂದು ನಿವೃತ್ತಿಯಾಗಲಿದ್ದಾರೆ. ಈಗಾಗಲೇ ಒಂದು ಸ್ಥಾನ ಖಾಲಿ ಉಳಿದಿದೆ.

ಶಿಕ್ಷಕರ ಕ್ಷೇತ್ರದಿಂದ ಚುನಾಯಿತರಾಗಿದ್ದ ಮರಿತಿಬ್ಬೇಗೌಡ ಅವರು ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ಡಾ. ವೈ.ಎ. ನಾರಾಯಣಸ್ವಾಮಿ ಅವರು ಜೂ.21ರಂದು ನಿವೃತ್ತಿಯಾಗಲಿದ್ದಾರೆ. ಖಾಲಿ ಇರುವ ಹಾಗೂ ನಿವೃತ್ತಿಯಿಂದ ತೆರವಾಗುವ ಮೇಲ್ಮನೆಯ ಸದಸ್ಯ ಸ್ಥಾನಕ್ಕೆ ಚುನಾವಣಾ ಆಯೋಗ ಚುನಾವಣೆ ಘೋಷಿಸಬೇಕಿದೆ.

ಪ್ರಸಕ್ತ ಲೋಕಸಭೆ ಚುನಾವಣೆ ಪ್ರಕ್ರಿಯೆ ಜೂ.6ರ ವೇಳೆಗೆ ಮುಕ್ತಾಯಗೊಳ್ಳಲಿದೆ. ಅಷ್ಟರ ವೇಳೆಗೆ ಮೇಲ್ಮನೆ ಚುನಾವಣೆಗೆ ವೇಳಾಪಟ್ಟಿ ಘೋಷಣೆಯಾದರೆ ಅಚ್ಚರಿ ಪಡಬೇಕಿಲ್ಲ. ಏ.26 ಹಾಗೂ ಮೇ.7 ರಂದು ಎರಡು ಹಂತದಲ್ಲಿ ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಮತದಾನ ನಡೆಯಲಿದೆ. ಆನಂತರ ವಿಧಾನಪರಿಷತ್ ಚುನಾವಣೆ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆಗಳಿವೆ.

RELATED ARTICLES

Latest News