ನಾಳೆ ವಿಧಾನಸೌಧ ಸ್ಯಾನಿಟೈಸ್, ಅಧಿಕಾರಿ-ನೌಕರರಿಗೆ ತಡವಾಗಿ ಕಚೇರಿಗೆ ಬರಲು ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.5-ವಿಧಾನಸೌಧ ಮೊದಲನೇ ಮಹಡಿಯಲ್ಲಿರುವ ವಿಧಾನಸಭಾ ಕಾವಲುಗಾರರ ಕೊಠಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸ್ ಪೇದೆ ಯೊಬ್ಬರಿಗೆ ಕೊರೋನ ಪಾಸಿಟಿವ್ ಬಂದಿದೆ.

ಆದುದರಿಂದ ವಿಧಾನಸೌಧದಲ್ಲಿ ನಾಳೆ ಸ್ಯಾನಿಟೈಸ್ ಮಾಡಲಾಗುತ್ತಿದ್ದು, ವಿಧಾನ ಸೌಧದಲ್ಲಿರುವ ವಿಧಾನಸಭೆ ಸಚಿವಾಲಯದ ಪ್ರತಿ ಶಾಖೆಯಲ್ಲಿ ಒಬ್ಬರು ಮಾತ್ರ ಬಂದು ಶಾಖೆಯ ಒಳಗೆ ಸ್ಯಾನಿಟೈಸ್ ಮಾಡುವಾಗ ನೋಡಿಕೊಳ್ಳಬೇಕು.

55ವರ್ಷ ದಾಟಿದ ಅಧಿಕಾರಿ ಹಾಗೂ ನೌಕರರುಗಳು ಮಾತ್ರ ನಾಳೆ ಒಂದು ದಿನ ಮಾತ್ರ ವಿಧಾನ ಸಭಾಧ್ಯಕ್ಷರ ಆದೇಶಾನುಸಾರ ರಜೆಯನ್ನು ಘೋಷಿಸಲಾಗಿದೆ.

ವಿಧಾನಸೌಧದಲ್ಲಿ ಕಾರ್ಯನಿರ್ವಹಿಸುತ್ತಿರುವ ಇತರೆ ಅಧಿಕಾರಿ ಹಾಗೂ ನೌಕರರು ಬೆಳಗ್ಗೆ ಹತ್ತು ಗಂಟೆ ಬದಲಿಗೆ ಮದ್ಯಾಹ್ನ 12ಗಂಟೆಗೆ ಹಾಜರಾಗಬೇಕೆಂದು. (ಒಂದು ದಿನ ಮಾತ್ರ ಕಚೇರಿಗೆ ತಡವಾಗಿ ಬರಲು) ಅಧಿಕೃತ ಪ್ರಟಣೆಯಲ್ಲಿ ತಿಳಿಸಲಾಗಿದೆ.

Facebook Comments

Sri Raghav

Admin