ಹೆಚ್.ವಿಶ್ವನಾಥ್, ಸಿ.ಪಿ.ಯೋಗೀಶ್ವರ್ ಸೇರಿ ವಿಧಾನಪರಿಷತ್ತಿಗೆ ಐವರ ನಾಮಕರಣ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾಜಿ ಸಚಿವರಾದ ಹೆಚ್.ವಿಶ್ವನಾಥ್, ಸಿ.ಪಿ ಯೋಗೀಶ್ವರ್ ಸೇರಿದಂತೆ ಐದು ಮಂದಿಯನ್ನು ವಿಧಾನಪರಿಷತ್ ಗೆ ರಾಜ್ಯ ಸರ್ಕಾರ ನಾಮಕರಣ ಮಾಡಿದೆ.

ಎಚ್.ವಿಶ್ವನಾಥ್, ಸಿಪಿ ಯೋಗೇಶ್ವರ್, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಶೆಟ್ಟಿ, ಪ್ರೊ.ತಳವಾರ ಸಾಬಣ್ಣ, ಶಾಂತಾರಾಮ್ ಸಿದ್ದಿ ಅವರನ್ನು ಆಯ್ಕೆ ಮಾಡಲಾಗಿದೆ.

ವಿವಿಧ ಕ್ಷೇತ್ರಗಳಿಂದ ಐವರನ್ನು ನಾಮ ನಿರ್ದೇಶನ ಮಾಡುವಂತೆ ಯಡಿಯೂರಪಪ್ ಅವರ ಮನವಿಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.ಮುಖ್ಯಮಂತ್ರಿ ಯಡಿಯೂರಪ್ಪ ಇಂದು ರಾಜ್ಯಪಾಲರನ್ನು ಭೇಟಿ ಮಾಡಿ ಚರ್ಚಿಸಿದ ನಂತರ ಈ ಪಟ್ಟಿ ಅಂತಿಮಗೊಂಡಿದ್ದು, ಇದೀಗ ಅಧಿಕೃತ ಆದೇಶ ಹೊರಬಿದ್ದಿದೆ.

ಹೆಚ್.ವಿಶ್ವನಾಥ್ (ಸಾಹಿತ್ಯ), ಸಾಬಣ್ಣ ತಳವಾರ್ (ಶಿಕ್ಷಣ), ಶಾಂತಾರಾಮ ಸಿದ್ದಿ (ಬುಡಕಟ್ಟು ಜನಾಂಗ), ಭಾರತಿ ಶೆಟ್ಟಿ (ಸಮಾಜಸೇವೆ) ಹಾಗೂ ಸಿ ಪಿ ಯೊಗೇಶ್ವರ್ (ಸಿನಿಮಾ) ಅಂತಿಮವಾಗಿ ಆಯ್ಕೆಯಾಗಿದ್ದಾರೆ.

ರಾಜ್ಯಸಭಾ ಚುನಾವಣೆಯಲ್ಲಿ ಕರ್ನಾಟದಿಂದ ಅಚ್ಚರಿಯ ಆಯ್ಕೆ ಮಾಡಿದ್ದ ಬಿಜೆಪಿ ಹೈಕಮಾಂಡ್ ಈಗ ವಿಧಾನಪರಿಷತ್​ಗೆ ನಾಮನಿರ್ದೇಶನದ ವಿಚಾರದಲ್ಲೂ ಇಬ್ಬರು ಅಚ್ಚರಿಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಸಾಬಣ್ಣ ತಳವಾರ್ ಹಾಗೂ ಶಾಂತಾರಾಮ ಸಿದ್ದಿ  ಅವರುಗಳು ಹೈಕಮಾಂಡ್ ಆಯ್ಕೆ ಮಾಡಿದೆ ಎನ್ನಲಾಗಿದೆ.

ಇನ್ನು ಜೆಡಿಎಸ್‍ಗೆ ರಾಜೀನಾಮೆ ನೀಡಿ ಬಿಜೆಪಿ ಸರ್ಕಾರ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಿಶ್ವನಾಥ್ ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸಿ ಚುನಾವಣೆಯಲ್ಲಿ ಸೋತಿದ್ದರು. ಹೀಗಾಗಿ ಬಿಜೆಪಿ ಪರಿಷತ್‍ಗೆ ಆಯ್ಕೆ ಮಾಡುತ್ತಾ ಇಲ್ಲವೋ ಎನ್ನುವುದು ಚರ್ಚೆಯಾಗುತ್ತಿತ್ತು. ಆದರೆ ಈಗ ಈ ಎಲ್ಲ ಚರ್ಚೆಗಳಿಗೆ ಅಂತಿಮ ವಿರಾಮ ಬಿದ್ದಿದೆ.

ವಿಧಾನಸಭೆಯಿಂದ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ವಿಶ್ವನಾಥ್ ಅವರಿಗೆ ಟಿಕೆಟ್ ಕೊಡಿಸುವಲ್ಲಿ ವಿಫಲರಾಗಿದ್ದ ಯಡಿಯೂರಪ್ಪ ನಾಮ ನಿದೇರ್ಶನದ ಮೂಲಕ ತಮ್ಮ ಸರಕಾರ ಸ್ಥಾಪನೆಗೆ ನೆರವಾದ ಹಳ್ಳಿಹಕ್ಕಿಗೆ ಋಣ ಸಂದಾಯ ಮಾಡಿದ್ದಾರೆ.

ಇದರ ಜೊತೆ ಭಾರತಿ ಶೆಟ್ಟಿ ಹಾಗೂ ಸಿ ಪಿ ಯೋಗೇಶ್ವರ್ ಆಯ್ಕೆಯಾಗುವುದರಲ್ಲಿಯೂ ಕೂಡ ಇವರ ಪಾತ್ರ ಪ್ರಮುಖವಾಗಿ ಗೋಚರಿಸಿದೆ.

ಉಳಿದಂತೆ ಶಾಂತರಾಮ್ ಸಿದ್ದಿ ಹಾಗೂ ಸಾಬಣ್ಣ ತಳವಾರ್ ಆಯ್ಕೆ ಹೈಕಮಾಂಡ್ ಸೂಚನೆಯಂತೆ ಆಗಿದೆ. ಹಿಂದುಳಿದ ವರ್ಗದ ಹಾಗೂ ತಳಮಟ್ಟದ ಸಮುದಾಯದವರಿಗೆ ಅವಕಾಶ ನೀಡುವಂತೆ ಹೈಕಮಾಂಡ್​​ ಸೂಚಿಸಿತ್ತು ಎನ್ನಲಾಗಿದೆ.

ಐವರು ಜನರಲ್ಲಿ ಈ ಬಾರಿ ವಿಶೇಷವಾಗಿ ಗಮನಸೆಳೆದ ವ್ಯಕ್ತಿ ಶಾಂತಾರಾಮ ಸಿದ್ದಿ. ಯಾಕೆಂದರೆ ಇವರು ಉತ್ತರಕನ್ನಡ ಜಿಲ್ಲೆಯ ಶಿರಸಿ-ಯಲ್ಲಾಪುರದ ಹಿತ್ನಳ್ಳಿಯವರು.

ಶಾಂತಾರಾಮ ಸಿದ್ಧಿ ಕಳೆದ ಹಲವಾರು ದಶಕಗಳಿಂದ ಸಂಘ ಪರಿವಾರದಲ್ಲಿ ಸಕ್ರಿಯರಾಗಿದ್ದು, ವನವಾಸಿ ಕಲ್ಯಾಣಾಶ್ರಮದ ವಿವಿಧ ಹಂತದ ಜವಾಬ್ದಾರಿ ನಿರ್ವಹಿಸಿದ್ದರು.

ಈ ಸಿದ್ದಿ ಬುಡಕಟ್ಟು ಜನಾಂಗ ಇದೆಯಲ್ಲ ಮೂಲತಃ ಇವರು ಆಫ್ರಿಕನ್. ಇವರು ಭಾರತದಲ್ಲಿ ದೀರ್ಘಕಾಲದಿಂದ ನೆಲೆಸಿದ್ದಾರೆ. ಆದರೆ ನಮ್ಮ ದೇಶದ ಸಮಾಜದ ಮುಖ್ಯವಾಹಿನಿ ಜತೆ ಬೆರೆಯುವಲ್ಲಿ ಈ ಜನಾಂಗ ವಿಫಲವಾಗಿದೆ.

ಈ ಜನಾಂಗವನ್ನು ಮೇಲಕ್ಕೆತ್ತುವ ನಿಟ್ಟಿನಲ್ಲಿ ಹಗಲು, ರಾತ್ರಿ ಶ್ರಮಿಸಲಾಗಿತ್ತು. ಅದರ ಪ್ರತಿಫಲ ಎಂಬಂತೆ ಸಿದ್ದಿ ಜನಾಂಗದ ಮೊದಲ ಪದವೀಧರರಾಗಿ ಹೊರಹೊಮ್ಮಿದವರು ಶಾಂತಾರಾಮ್!
ರಾಜ್ಯಪಾಲರ ವಿ.ಆರ್ ವಾಲಾ ಅವರು,ಭಾರತೀ ಶೆಟ್ಟಿ,ಸಿ.ಪಿ.ಯೋಗೀಶ್ವರ್,ಎಚ್.ವಿಶ್ವನಾಥ್ ನೇಮಕಕ್ಕೆ ಅನುಮೋದನೆ ನೀಡಲು ಒಪ್ಪಿಗೆ ನೀಡರಲಿಲ್ಲ ಎನ್ನಲಾಗಿದೆ.

ಹೀಗಾಗಿ ಇಂದು ಬೆಳೆಗ್ಗೆ ರಾಜಭವನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ ನೀಡಿ ರಾಜ್ಯ ಪಾಲರ ಜೊತೆ ಚೆರ್ಚಿಸಿ ರಾಜಕೀಯ ವ್ಯಕ್ತಿಗಳ ನೇಮಕಕ್ಕೂ ಒಪ್ಪಿಗೆ ನೀಡುವಂತೆ ಮನವಿ ಮಾಡಿದ್ದರು ಎನ್ನಲಾಗಿದೆ.

ಇತ್ತೀಚಿಗೆ ನಿವೃತ್ತಿ ಹೊಂದಿದ್ದ 9 ವಿಧಾನ ಪರಿಷತ್ ಸದಸ್ಯರ ಚುನಾವಣೆ ವೇಳೆ ಎಚ್.ವಿಶ್ವನಾಥ್ ಹಾಗೂ ಸಿ.ಪಿ. ಯೋಗೇಶ್ವರ್ ಗೆ ಟಿಕೆಟ್ ಕೈತಪ್ಪಿತ್ತು. ಆದರೆ ಆರ್.ಶಂಕರ್ ಮತ್ತು ಎಂಟಿಬಿ ನಾಗರಾಜ್ ಅವರಿಗೆ ಪಕ್ಷದ ನಾಯಕರು ಅವಕಾಶ ನೀಡಿದ್ದರು.

ರಾಜ್ಯದ ವಿಧಾನಪರಿಷತ್​ನಲ್ಲಿ ಒಟ್ಟು 11 ಸ್ಥಾನಗಳನ್ನ ರಾಜ್ಯಪಾಲರೇ ನೇರವಾಗಿ ನಾಮನಿರ್ದೇಶನ ಮಾಡುತ್ತಾರೆ. ಅದರಲ್ಲಿ ಈಗ ಐದು ಸ್ಥಾನಗಳು ಖಾಲಿ ಇದ್ದವು.

ವಿಧಾನಸಭೆಯಿಂದ ವಿಧಾನಪರಿಷತ್ ಗೆ ನಡೆದಿದ್ದ ಚುನಾವಣೆಯಲ್ಲಿ ಯಡಿಯೂರಪ್ಪ ಅವರು ಸೂಚಿಸಿದ ಅಭ್ಯಾರ್ಥಿಗಳನ್ನೇ ಆಯ್ಕೆ ಮಾಡಲಾಗಿತ್ತು.

ಆರ್.ಶಂಕರ್, ಎಂಟಿಬಿ ನಾಗರಾಜ್ , ಸುನಿಲ್ ವಲ್ಯಾಪುರೆ, ಹಾಗೂ ಪ್ರತಾಪ್ ಸಿಂಹ ನಾಯಕ್ ಅವರುಗಳನ್ನು ಆಯ್ಕೆ ಮಾಡಲಾಗಿತ್ತು. ಒಟ್ಟಾರೆ ಯಡಿಯೂರಪ್ಪ ಕೊಟ್ಟ ಮಾತು ಉಳಿಸಿಕೊಂಡು ಸರ್ಕಾರ ಹಾಗೂ ಪಕ್ಷದಲ್ಲೂ ಮತ್ತೊಮ್ಮೆ ಹಿಡಿತ ಸಾಧಿಸಿರುವುದು ಸ್ಪಷ್ಟವಾಗಿದೆ.

Facebook Comments

Sri Raghav

Admin