“ಹಣವಿಲ್ಲದೆ ಸಚಿವಾಲಯದಲ್ಲಿ ಕಡತಗಳು ಮುಂದೆ ಹೋಗಲ್ಲ”

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.4- ಕರ್ನಾಟಕದ ರಾಜ್ಯ ಸಚಿವಾಲಯದಲ್ಲಿ ಹಣ ಕೊಡದೆ ಯಾವುದೇ ಕಡತಗಳು ಮುಂದೆ ಹೋಗುವುದಿಲ್ಲ ಎಂದು ಆಡಳಿತ ಪಕ್ಷದ ಶಾಸಕ ವೈ.ಎ.ನಾರಾಯಣಸ್ವಾಮಿ ಮಾಡಿದ ಆರೋಪ ವಿಧಾನಪರಿಷತ್‍ನಲ್ಲಿ ಕೆಲ ಕಾಲ ಚರ್ಚೆಗೆ ಗ್ರಾಸವಾಯಿತು. ಪ್ರಶ್ನೋತ್ತರ ಅವಯಲ್ಲಿ ನಾರಾಯಣಸ್ವಾಮಿ ಅವರು ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿ ಅವರ ಪರವಾಗಿ ಉತ್ತರ ನೀಡಿದ ಸಚಿವ ಕೋಟಾ ಶ್ರೀನಿವಾಸಪೂಜಾರಿ ಅವರು, ಸಚಿವಾಲಯದಲ್ಲಿ ಒಟ್ಟು 269 ಅಕಾರಿ ಮತ್ತು ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ ಎಂದು ವಿವರಣೆ ನೀಡಿದರು.

ಉಪ ಪ್ರಶ್ನೆ ಕೇಳಿದ ನಾರಾಯಣಸ್ವಾಮಿ ಅವರು, ಸಚಿವಾಲಯದಲ್ಲಿ ಹಲವಾರು ವರ್ಷಗಳಿಂದ ಅಕಾರಿಗಳು ಮತ್ತು ಸಿಬ್ಬಂದಿಗಳು ನೆಲೆಯೂರಿದ್ದಾರೆ. ಬೇರೆ ಬೇರೆ ಇಲಾಖೆಗಳಲ್ಲಿ ಬೇರೆ ಜಿಲ್ಲೆಗಳಿಗೆ ವರ್ಗಾವಣೆಗೆ ಅವಕಾಶವಿದೆ. ಸಚಿವಾಲಯದ ನೌಕರರಿಗೆ ವಿಧಾನಸೌಧ, ವಿಕಾಸಸೌಧ, ಎಂ.ಎಸ್.ಬಿಲ್ಡಿಂಗ್ ಬಿಟ್ಟರೆ ಬೇರೆ ಕಡೆ ವರ್ಗಾವಣೆ ಮಾಡುವಂತಿಲ್ಲ.

ಈ ಅಕಾರಿಗಳು ಯಾರ ಮಾತಿಗೂ ಜಗ್ತುತ್ತಿಲ್ಲ. ಹಣ ಕೊಡದೆ ಒಂದು ಪೈಲನ್ನು ಮುಂದಕ್ಕೆ ಹೋಗಲು ಬಿಡುವುದಿಲ್ಲ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಮುಖ್ಯಮಂತ್ರಿ ಅವರ ಬಳಿಯೇ ಇದೆ. ಈವರೆಗೂ ಅವರು ಎಷ್ಟು ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದಾರೆ ಎಂದು ಪ್ರಶ್ನಿಸಿದರು.

ಸದಸ್ಯರ ಆರೋಪಕ್ಕೆ ಬೆಂಬಲ ನೀಡಿದ ಪ್ರತಿ ಪಕ್ಷದ ನಾಯಕರಾದ ಎಸ್.ಆರ್.ಪಾಟೀಲ್, ನಾವು ಹೇಳಿದರೆ ರಾಜಕೀಯ ಎನ್ನುತ್ತೀರಾ. ಆಡಳಿತ ಪಕ್ಷದ ಶಾಸಕರೇ ಹೇಳುತ್ತಿದ್ದಾರೆ. ಈ ಮೊದಲು ವಿಶ್ವನಾಥ್ ಅವರು ಈ ಆರೋಪ ಮಾಡಿದ್ದರು. ಈಗ ನಾರಾಯಣಸ್ವಾಮಿ ಅವರು ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.

ಸಭಾನಾಯಕ ಕೋಟಾ ಶ್ರೀನಿವಾಸಪೂಜಾರಿ ಅವರು ಸಚಿವಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಮೇಲೆ ಚಲನವಲನಗಳ ಮೇಲೆ ನಿಗಾ ಇಡುವ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು, ದುರ್ನಡತೆ ಪ್ರದರ್ಶಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲು ಮುಖ್ಯ ಕಾರ್ಯದರ್ಶಿ ಅವರಿಗೆ ಸೂಚಿಸುವುದಾಗಿ ಹೇಳಿದರು.

Facebook Comments

Sri Raghav

Admin