ಗಂಡನನ್ನು ಕೊಂದು ಆಟೋ ಚಾಲಕನ ಜೊತೆ ಪರಾರಿಯಾದ ವಿದ್ಯಾ ಅರೆಸ್ಟ್..!

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು,ಡಿ.4- ಅಕ್ರಮ ಸಂಬಂಧಕ್ಕೆ ಅಡ್ಡಿಪಡಿಸುತ್ತಿದ್ದ ಪತಿಯನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಪತ್ನಿ ಹಾಗೂ ಆಟೋ ಚಾಲಕನನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.  ಶಿರಾಗೇಟ್‍ನ ಪಂಚನಾಥ ರಾಯರಪಾಳ್ಯದ ಸತೀಶ್(22), ಹೊಂಬಯ್ಯನಪಾಳ್ಯದ ವಿದ್ಯಾ(26) ಬಂಧಿತ ಆರೋಪಿಗಳು.

ಶಿರಾ ಗೇಟ್ ಹೊಂಬಯ್ಯನಪಾಳ್ಯದ ಬಾಡಿಗೆ ಮನೆಯಲ್ಲಿ ಹನುಮೇಗೌಡ ಮತ್ತು ವಿದ್ಯಾ ದಂಪತಿ ವಾಸವಾಗಿದ್ದು, ಈ ನಡುವೆ ವಿದ್ಯಾಳಿಗೆ ಆಟೋ ಚಾಲಕ ಸತೀಶನ ಪರಿಚಯವಾಗಿದೆ. ಪರಿಚಯ ಸ್ನೇಹಕ್ಕೆ ತಿರುಗಿ ನಂತರ ಈತನೊಂದಿಗೆ ವಿದ್ಯಾ ಸಲುಗೆಯಿಂದ ಇದ್ದರು.

ಈ ವಿಷಯ ತಿಳಿದ ಹನುಮೇಗೌಡ ಸತೀಶನಿಗೆ ಹಾಗೂ ಪತ್ನಿ ವಿದ್ಯಾಳಿಗೆ ಬುದ್ದಿವಾದ ಹೇಳಿದ್ದರು. ಹನುಮೇಗೌಡ ತಮ್ಮ ಸಂಬಂಧಕ್ಕೆ ಅಡ್ಡಿಪಡಿಸುತ್ತಾನೆ ಎಂದು ತಿಳಿದು ಡಿ.2ರಂದು ಮಧ್ಯರಾತ್ರಿ 12.30ರ ಸುಮಾರಿನಲ್ಲಿ ಹನುಮೇಗೌಡನ ಜೊತೆ ಇವರಿಬ್ಬರು ಜಗಳವಾಡಿ ಚಾಕುವಿನಿಂದ ಇರಿದು ಕೊಲೆ ಮಾಡಿ ಆಟೋದಲ್ಲಿ ಪರಾರಿಯಾಗಿದ್ದರು.
ಆರೋಪಿಗಳ ಪತ್ತೆಗಾಗಿ ರಚಿಸಲಾಗಿದ್ದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

Facebook Comments