ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ವಿದ್ಯಾಬಾಲನ್ ನಟನೆಯ ಚಿತ್ರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.16- ಭಾರತೀಯ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿರುವ ನಟಿ ವಿದ್ಯಾಬಾಲನ್ ಅವರ ನಟನೆಯ ನಟ್ಕಟ್ ಕಿರು ಚಿತ್ರ 2021ರ ಸಾಲಿನ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ. ವಿದ್ಯಾಬಾಲನ್ ಅವರ ಸ್ವಂತ ಬ್ಯಾನರ್‍ನಲ್ಲಿ ನಿರ್ಮಿಸಿರುವ 33 ನಿಮಿಷಗಳ ನಟ್ಕಟ್ ಉತ್ತಮ ಕಿರು ಚಿತ್ರಗಳ ವಿಭಾಗದಲ್ಲಿ ಆಸ್ಕರ್‍ಗೆ ನಾಮನಿರ್ದೇಶನಗೊಂಡಿದೆ. ಜಾಗತಿಕ ಮಟ್ಟದ ಕಿರುಚಿತ್ರಗಳ ಜೊತೆ ನಟ್ಕಟ್ ಸ್ಪರ್ಧೆ ಮಾಡಲಿದೆ. ಈ ಚಿತ್ರವನ್ನು ಶಾನ್ ವ್ಯಾಸ್ ನಿರ್ದೇಶಿಸಿದ್ದಾರೆ.

ಪರಮಾಣು ಶಕ್ತಿ ಸಂಶೋಧನೆಯ ವೇಳೆ ಯೂರೆನಿಯಂನಿಂದ ಜನರ ಆರೋಗ್ಯದ ಮೇಲಾಗುವ ಪರಿಣಾಮಗಳ ಕುರಿತು ಈ ಚಿತ್ರ ನಿರ್ಮಾಣಗೊಂಡಿದೆ. ಭಾರತದ ಕೈಟ್ ಗೋಮ್ಸ್ ನಿರ್ದೇಶನ ಶೇಮ್‍ಲೆಸ್, ತುಷಾರ್ ತ್ಯಾಗಿ ನಿರ್ದೇಶನದ ಸೇವಿಂಗ್ ಚಿಂಟುಮ ಶಾನ್ ವ್ಯಾಸ್ ನಿರ್ದೇಶನದ ನಟ್ಕತ್ ಚಿತ್ರಗಳು ಭಾರತದಿಂದ ಆಸ್ಕರ್ ಪ್ರಶಸ್ತಿಯ ಸ್ಪರ್ಧೆಯಲ್ಲಿದ್ದವು. ಅಂತಿಮವಾಗಿ ನಟ್ಕತ್ ಆಸ್ಕರ್ ಅಂಗಳಕ್ಕೆ ತಲುಪಿದೆ. ಈ ಬಗ್ಗೆ ಚಿತ್ರ ನಿರ್ಮಾಣ ಸಂಸ್ಥೆ ಹರ್ಷ ವ್ಯಕ್ತ ಪಡಿಸಿದೆ.

Facebook Comments