ವಿಜಯನಗರ ಜಿಲ್ಲೆ ರಚನೆಗೆ ಸಂಪುಟ ವಿದ್ಯುಕ್ತ ಅನುಮೋದನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.27-ಬಳ್ಳಾರಿ ಜಿಲ್ಲೆ ವಿಭಾಗಿಸಿ ನೂತನವಾಗಿ ವಿಜಯನಗರ ಜಿಲ್ಲೆ ರಚನೆ ಮಾಡಲು ರಾಜ್ಯ ಸರ್ಕಾರ ಇಂದು ವಿದ್ಯುಕ್ತವಾಗಿ ಅನುಮೋದನೆ ನೀಡಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ವಿಜಯನಗರ ಜಿಲ್ಲೆಗೆ ಐದು ತಾಲ್ಲೂಕುಗಳನ್ನು ಸೇರ್ಪಡೆ ಮಾಡಲು ಸರ್ಕಾರ ಸಮ್ಮತಿಸಿದೆ.

ನೂತನವಾಗಿ ರಚನೆಯಾಗಲಿರುವ ವಿಜಯನಗರ ಜಿಲ್ಲೆಗೆ ಹೊಸಪೇಟೆ, ಹರಪ್ಪನಹಳ್ಳಿ, ಹೂವಿನಹಡಗಲಿ, ಅಗರಿಬೊಮ್ಮನಹಳ್ಳಿ, ಕೊಟ್ಟರೂ ಹಾಗೂ ಕೂಡ್ಲಗಿ ತಾಲ್ಲೂಕುಗಳು ಈ ಜಿಲ್ಲಾ ವ್ಯಾಪ್ತಿಗೆ ಬರಲಿವೆ ಎಂದು ಸಭೆಯ ಬಳಿಕ ಕಾನೂನು ವ್ಯವಹಾರಗಳ ಸಚಿವ ಜಿ.ಟಿ.ಮಾಧುಸ್ವಾಮಿ ಪತ್ರಿಕಾಗೋಷ್ಠಿಗೆ ತಿಳಿಸಿದರು.

ಕಳೆದ ಸಚಿವ ಸಂಪುಟ ಸಭೆಯಲ್ಲಿ ಬಳ್ಳಾರಿಯನ್ನು ವಿಭಜಿಸಿ ವಿಜಯನಗರ ಜಿಲ್ಲೆಯನ್ನು ಸ್ಥಾಪನೆ ಮಾಡಲು ತೀರ್ಮಾನಿಸಲಾಗಿತ್ತು. ಇದರಂತೆ ವಿಜಯನಗರ ಜಿಲ್ಲೆಗೆ ಆರು ತಾಲ್ಲೂಕುಗಳು, ಉಳಿದ ತಾಲ್ಲೂಕುಗಳು ಬಳ್ಳಾರಿಗೆ ಉಳಿಯಲಿವೆ. ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಪಡೆದು ನಂತರ ಅಕೃತವಾಗಿ ಜಿಲ್ಲೆಯನ್ನು ಘೋಷಣೆ ಮಾಡಲಾಗುವುದು ಎಂದರು.

Facebook Comments