ಭೀಮಾತೀರದಲ್ಲಿ ದರೋಡೆ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ವಿಜಯಪುರ,ಮಾ.8- ಭೀಮಾತೀರದ ಭಾಗದಲ್ಲಿ ದರೋಡೆ ಮಾಡುತ್ತಿದ್ದವರ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆಸಿರುವ ಇಂಡಿ ಗ್ರಾಮೀಣ ಠಾಣೆಯ ಪೊಲೀಸರು 8 ಮಂದಿ ದರೋಡೆಕೋರರನ್ನು ಇಂದು ಬಂಧಿಸಿದ್ದಾರೆ. ವಿದ್ಯಾಧರ ಮೇತ್ರಿ, ಕೇದಾರಲಿಂಗ್ ಪಾಟೀಲ್, ಸಾಗರ ಜಗ, ಸುನೀಲ್, ಸುಂದರ್, ರಮೇಶ್ ಪೂಜಾರಿ, ರಮೇಶ ಸಾತಿಹಾಳ್, ರವಿಕಾಂತ್ ಬಂಧಿತ ದರೋಡೆಕೋರರು.

ಭೀಮಾತೀರದ ಭಾಗದಲ್ಲಿ ಗ್ಯಾಂಗ್ ಕಟ್ಟಿಕೊಂಡು ರಾತ್ರಿ ಸಮಯದಲ್ಲಿ ವಾಹನಗಳನ್ನು ತಡೆದು ಜನರಿಂದ ಹಣ ಸುಲಿಗೆ ಮಾಡುತ್ತಿದ್ದರು. ಅಷ್ಟೇ ಅಲ್ಲದೇ ಹಣ ಕೊಡದವರಿಗೆ ಪಿಸ್ತೂಲ್ ಹಾಗೂ ತಲವಾರ್ ತೋರಿಸಿ ಬೆದರಿಸಿ ದರೋಡೆ ನಡೆಸುತ್ತಿದ್ದರು.

ಈ ಕುರಿತು ಖಚಿತ ಮಾಹಿತಿ ಆಧರಿಸಿದ ಇಂಡಿ ಗ್ರಾಮೀಣ ಠಾಣಾ ಪೊಲೀಸರು ತಂಡಗಳನ್ನು ರಚಿಸಿ, ತಡರಾತ್ರಿ ಕಾರ್ಯಾಚರಣೆಗಿಳಿದು ಗ್ಯಾಂಗನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರಿಂದ ಒಂದು ಕಂಟ್ರೀ ಪಿಸ್ತೂಲ್, 6 ಜೀವಂತ ಗುಂಡು, ತಲವಾರ್‍ಗಳು ಸೇರಿದಂತೆ ದರೋಡೆ ಬಳಕೆ ಮಾಡುತ್ತಿದ್ದ ಬ್ಲಾಕ್ ಕಾರೊಂದನ್ನು ವಶಪಡಿಸಿಕೊಂಡಿದ್ದಾರೆ. ಆಲಮೇಲ್, ಇಂಡಿ ಸೇರಿದಂತೆ ಹಲವೆಡೆ ಕಡೆಗಳಲ್ಲಿ ಈ ಗ್ಯಾಂಗ್ ರಾತ್ರಿ ವೇಳೆ ದರೋಡೆ ಕೃತ್ಯ ನಡೆಸುತ್ತಿತ್ತು.

ಚಿಕ್ಕೋಡಿ ಪೊೀಲಿಸ್ ಠಾಣೆಯ ರೌಡಿ ಶೀಟರ್ ವಿದ್ಯಾಧರ್ ಮೇತ್ರಿ ಈ ಗ್ಯಾಂಗ್‍ನ ಮುಖ್ಯಸ್ಥ. ಈ ಖತರ್ನಾಕ್ ಗ್ಯಾಂಗ್‍ನ ಬಂಧನದಿಂದ ಭೀಮಾ ತೀರದ ಜನತೆ ನಿಟ್ಟುಸಿರು ಬಿಡುವಂತಾಗಿದೆ. ಬಂಧಿತ ಖದೀಮರನ್ನು ಪೊಲೀಸರ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

Facebook Comments