ಕಲ್ಲಿನಿಂದ ಜಜ್ಜಿ ಯುವಕನೊಬ್ಬನನ್ನು ಬರ್ಬರ ಹತ್ಯೆ
ಈ ಸುದ್ದಿಯನ್ನು ಶೇರ್ ಮಾಡಿ
ವಿಜಯಪುರ, ಜ.11- ಕಲ್ಲಿನಿಂದ ಜಜ್ಜಿ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ನಿಡಗುಂದಿ ಪಟ್ಟಣದಲ್ಲಿ ನಡೆದಿದೆ. ಮೃತರನ್ನು ಮಹಾಂತೇಶ ಗೌಡ(32) ಎಂದು ಗುರುತಿಸಲಾಗಿದೆ.
ಮೃತದೇಹವು ಪಟ್ಟಣದ ಸರಕಾರಿ ಆಸ್ಪತ್ರೆಯ ಸಮೀಪದ ಸ್ಮಶಾನದಲ್ಲಿ ಪತ್ತೆಯಾಗಿದ್ದು, ಮುಖದ ಮೇಲೆ ಕಲ್ಲಿನಿಂದ ಜಜ್ಜಿರುವಂತೆ ಗಾಯದ ಗುರುತುಗಳಿವೆ.
ಹಳೆ ದ್ವೇಷದ ಹಿನ್ನೆಲೆಯಲ್ಲಿ ಪರಿಚಯಸ್ಥರೇ ಈತನನ್ನು ಕೊಲೆ ಮಾಡಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ನಿಡಗುಂದಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
Facebook Comments
Comments are closed.