ಮಹಿಳೆಯ ಮೇಲೆ ಲಾಠಿ ಪ್ರಹಾರ ಮಾಡಿದ ಗ್ರಾಮ ಲೆಕ್ಕಿಗನ ವಿರುದ್ಧ ದೂರು ದಾಖಲು

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಮಗಳೂರು, – ಮೂಡಿಗೆರೆ ಪಟ್ಟಣದಲ್ಲಿ ತರಕಾರಿ ಖರೀದಿ ವೇಳೆ ಶಬನ ಎಂಬ ಮಹಿಳೆಯ ಮೇಲೆ ಗ್ರಾಮಲೆಕ್ಕಿಗ ಗಿರೀಶ್ ಪೈಪ್ ನಿಂದ ಹಲ್ಲೆ ನಡೆಸಿರುವ ಗ್ರಾಮಲೆಕ್ಕಿಗ ಗಿರೀಶ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಐಪಿಸಿ 324, 504 ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು ಗ್ರಾಮಲೆಕ್ಕಿಗ ಗಿರೀಶ್ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಅಂಗಡಿಯ ಮೇಲೆ ಲಾಠಿ ಪ್ರಹಾರ ಮಾಡಿದ ಸಂದರ್ಭದಲ್ಲಿ ಮಹಿಳೆಗೆ ಪೆಟ್ಟುಬಿದ್ದಿತ್ತು. ಸಿಸಿಟಿವಿಯಲ್ಲಿ ಲಾಠಿಯಲ್ಲಿ ಹೊಡೆದ ದೃಶ್ಯ ಸರಿ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿತ್ತು.  ಮೂಡಿಗೆರೆ ಪಟ್ಟಣದಲ್ಲಿ ತರಕಾರಿ ಖರೀದಿ ವೇಳೆ ಶಬನ ಎಂಬ ಮಹಿಳೆಯ ಮೇಲೆ ಗ್ರಾಮಲೆಕ್ಕಿಗ ಗಿರೀಶ್ ಪೈಪ್ ನಿಂದ ಹಲ್ಲೆ ನಡೆಸಿರುವ ಘಟನೆ ಕುರಿತು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ರಾಜ್ಯ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು ಎಂದು ಮಾಜಿ ಸಚಿವೆ ಶ್ರೀಮತಿ ಮೋಟಮ್ಮ ತಿಳಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು ತಾಲೂಕಿನಲ್ಲಿ ಸರ್ಕಾರದ ವ್ಯವಸ್ಥೆ ಸಂಪೂರ್ಣವಾಗಿ ಸತ್ತು ಹೋಗಿದೆ. ಮಹಿಳೆ ತರಕಾರಿ ಹಾಗೂ ಸೊಪ್ಪು ಖರೀದಿಗಾಗಿ ಬಂದಿದ್ದು ಯಾವುದೇ ವಿಚಾರಣೆ ನಡೆಸದೆ ಗ್ರಾಮಲೆಕ್ಕಿಗರು ಏಕಾಏಕಿ ಬಂದು ಹಲ್ಲೆ ನಡೆಸುವ ದೃಶ್ಯ ವಿಡಿಯೋದಲ್ಲಿದೆ. ಘಟನೆ ಸಂಭವಿಸಿ ಮಾಧ್ಯಮಗಳಲ್ಲಿ ಪ್ರಸಾರವಾದರೂ ಜಿಲ್ಲಾಡಳಿತವಾಗಲಿ, ತಾಲೂಕು ಆಡಳಿತ ವಾಗಲಿ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಮನೆಯಲ್ಲಿಯೇ ಮಹಿಳೆಯರ ಮೇಲೆ ಕೈ ಮಾಡುವುದು ಕಾನೂನುಬಾಹಿರವಾಗಿದೆ. ಸಾರ್ವಜನಿಕವಾಗಿ ಹಲ್ಲೆ ನಡೆಸಿರುವ ಗ್ರಾಮಲೆಕ್ಕಿಗರನ್ನು ಅಮಾನತು ಗೊಳಿಸಿ ಆತನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು.

ಕಾನೂನಿನಲ್ಲಿ ಲಾಠಿ ಹಿಡಿಯಲು ಕೂಡ ಕೆಲವು ನಿಯಮಗಳಿವೆ ಲಾಟಿ ಹಿಡಿಯುವುದಕ್ಕಾಗಿ ಪೊಲೀಸರಿಗೆ ತರಬೇತಿಗಳು ಕೂಡ ಕೊಡಲಾಗಿರುತ್ತದೆ. ಅಂತಹದರಲ್ಲಿ ಕಂದಾಯ ಇಲಾಖೆ ಅಧಿಕಾರಿಗಳಿಗೆ ಲಾಟಿ ಕೊಟ್ಟವರು ಯಾರು? ಅಧಿಕಾರ ನೀಡಿದವರು ಯಾರು ಅದರಲ್ಲೂ ಪೈಪನ್ನು ಹಿಡಿದು ಹಲ್ಲೆ ನಡೆಸುವುದು ಅಕ್ಷಮ್ಯವಾಗಿದೆ. ಮಹಿಳೆಗೆ ಮಾತ್ರವಲ್ಲದೆ ಹಲವಾರು ಪುರುಷರು ಮೇಲೂ ಹಲ್ಲೆ ನಡೆಸಿದ್ದು ಹಲವರಿಗೆ ಕೈಕಾಲುಗಳು ಬಾಸುಂಡೆ ಬಂದಿವೆ.

ಈಗಾಗಲೇ ಮಹಿಳೆ ಕೈ ಮುರಿದಿದ್ದು ಚಿಕಿತ್ಸೆ ಪಡೆದಿದ್ದಾರೆ. ಬಹಿರಂಗವಾಗಿ ಹೇಳಿಕೆಯನ್ನು ನೀಡಿದ್ದಾರೆ ಜಿಲ್ಲಾಡಳಿತ ಮೌನವಹಿಸಿದೆ ಮಹಿಳೆಯ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿದಂತೆ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡುತ್ತೇನೆ ಒಂದು ಮೋಟಮ್ಮ ತಿಳಿಸಿದರು.

Facebook Comments