ವಿನಯ್ ಕುಲಕರ್ಣಿ ಮೇಲೆ ಮುಗಿಬಿದ್ದ ಲಿಂಗಾಯತ ಶಾಸಕರು

ಈ ಸುದ್ದಿಯನ್ನು ಶೇರ್ ಮಾಡಿ

ಹುಬ್ಬಳ್ಳಿ,ಏ.20-ಕಾಂಗ್ರೆಸ್ ಪಕ್ಷ ಲಿಂಗಾಯತರ ಮೇಲೆ ನಿರಂತರವಾಗಿ ದಬ್ಬಾಳಿಕೆ ಮಾಡುತ್ತಿದೆ ಇದನ್ನ ಖಂಡಿಸುತ್ತೇವೆ ಎಂದು ಶಾಸಕ ಅರವಿಂದ ಬೆಲ್ಲದ ತಿಳಿಸಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಲಿಂಗಾಯತ ಧರ್ಮ ವಿಚಾರದಲ್ಲಿ ವಿನಯ ಕುಲಕರ್ಣಿ ಈ ಹಿಂದೆ ಪೆಟ್ಟು ತಿಂದಿದ್ದರೂ ಇನ್ನೂ ಸುಧಾರಿಸಿಲ್ಲ. ಮತ್ತೆ ಲೋಕ ಸಭೆ ಚುನಾವಣೆಗೆ ನಿಂತು ಪ್ರಹ್ಲಾದ್ ಜೋಶಿ, ಯಡಿಯೂರಪ್ಪ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುತ್ತಿದ್ದಾರೆ.

ಇದು ಖಂಡನೀಯ ಹಾಗೂ ಸಮುದಾಯಕ್ಕೆ ಮಾಡಿದ ಅವಮಾನ ಎಂದರು.6 ಜನ ಲಿಂಗಾಯತ ಶಾಸಕರನ್ನ ಆರಿಸಿದ ಕೀರ್ತಿ ಬಿಜೆಪಿಗೆ ಸಲ್ಲಬೇಕು. ತಮ್ಮ ಸಾಧನೆಯನ್ನ ಹೇಳದೇ ಮೋದಿ ಅವರನ್ನ ಜರಿಯುತ್ತಿರುವ ಕಾಂಗ್ರೆಸ್ ಪಕ್ಷದವರಿಗೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದರು. ವಿನಯ್ ಕುಲಕರ್ಣಿಯವರು ತಾವೊಬ್ಬರೇ ಲಿಂಗಾಯತರು ಅನ್ನೊ ರೀತಿ ಮಾತಾಡ್ತಿದ್ದಾರೆ. ನಾವೂ ಲಿಂಗಾಯತರೇ.

ವಿನಯ ಕುಲಕರ್ಣಿ ಜಿಲ್ಲಾ ಉಸ್ತುವಾರಿ ಆಗಿದ್ದಾಗ ಕುಡಿಯೋ ನೀರು ತರಲಿಲ್ಲ ಎಂದು ತಿಳಿಸಿದರು. ಜಗದೀಶ ಶೆಟ್ಟರ್‍ಗೆ ದೆಹಲಿ ರಾಜಕಾರಣದಲ್ಲಿ ಆಸಕ್ತಿ ಇಲ್ಲ. ಈಗಾಗಲೇ ಬಿಎಸ್‍ವೈ ಮುಖ್ಯಮಂತ್ರಿ ಎಂದು ಬಿಂಬಿಸಲಾಗಿದೆ. ಲಿಂಗಾಯತರಿಗೆ ಆದ ಅನ್ಯಾಯವನ್ನ ನಾವು ಖಂಡಿಸುತ್ತೇವೆ. ಕಾಂಗ್ರೆಸ್ ಪಕ್ಷ ಲಿಂಗಾಯತರನ್ನ ಯಾವತ್ತೂ ಬೆಂಬಲಿಸಲ್ಲ. ಲಿಂಗಾಯತರ ಹಿತಾಸಕ್ತಿ ಕಾಯ್ದುಕೊಳ್ಳುವ ಪಕ್ಷ ಬಿಜೆಪಿ ಎಂದು ಹೇಳಿದರು.

ಸರ್ಕಾರಿ ಕಚೇರಿಯಲ್ಲಿ ಬಸವಣ್ಣವನರ ಫೋಟೋ ಹಾಕೋದು ಕೇವಲ ಚುನಾವಣಾ ಗಿಮಿಕ್. ಆರ್.ಎಸ್.ಎಸ್. ಪ್ರಾತಃ ಸ್ಮರಣೆಯಲ್ಲಿ ದೇಶಕ್ಕಾಗಿ ಪ್ರಾಣ ತೆತ್ತವರ ನಾಮಸ್ಮರಣೆ ಆಗುತ್ತೆ. ಅದರಲ್ಲಿ ಬಸವಣ್ಣನವರ ಹೆಸರೂ ಬರುತ್ತೆ. ಕಾಂಗ್ರೆಸ್ ನವರಿಗೆ ಆರ್‍ಎಸ್‍ಎಸ್ ಗಂಧ ಗಾಳಿ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಕಲಘಟಗಿ ಶಾಸಕ ಸಿಎಂ ನಿಂಬಣ್ಣವರ, ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ, ನವಲಗುಂದ ಶಾಸಕ ಶಂಕರಪಾಟೀಲ ಮುನೇನಕೊಪ್ಪ, ಪ್ರದೀಪ ಶೆಟ್ಟರ್, ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡರ್, ಮಾಜಿ
ಸಂಸದ ಮಂಜುನಾಥ ಕುಣ್ಣೂರ್, ಬಿಜೆಪಿ ಮುಖಂಡರಾದ ಶಂಕರಣ್ಣ ಮುನವಳ್ಳಿ ಹಾಗೂ ಮೋಹನ, ಲಿಂಬಿಕಾಯಿ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ