ಕ್ಷೇತ್ರದ ಅಭಿವೃದ್ಧಿಗೆ ಜೋಶಿ ಕೊಡುಗೆ ಶೂನ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಹುಬ್ಬಳ್ಳಿ, ಏ,20: ಕಳಸಾ ಬಂಡೂರಿ ಹಾಗೂ ಮಹದಾಯಿ ಯೋಜನೆ ಜಾರಿಯಲ್ಲಿ ಇಷ್ಟು ಹಿನ್ನಡೆಯಾಗಲು ಸಂಸದರಾಗಿದ್ದ ಬಿಜೆಪಿಯ ಅಭ್ಯರ್ಥಿ ಪ್ರಲ್ಹಾದ್ ಜೋಶಿಯೇ ಕಾರಣ ಎಂದು ಕಾಂಗ್ರೆಸ್ ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ವಿನಯ ಕುಲಕರ್ಣಿ ಗಂಭೀರ ಆರೋಪ ಮಾಡಿದರು. ಹುಬ್ಬಳ್ಳಿಯಲ್ಲಿಂದು ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಯೋಜನೆಯಾದ ಸಂಸದರ ಮಾದರಿ ಗ್ರಾಮ ಸೇರಿದಂತೆ ಗ್ರಾಮಾಂತರ ಭಾಗಕ್ಕೆ ಅಭಿವೃದ್ಧಿ ಯಾವುದೇ ಕೊಡುಗೆ ಇಲ್ಲ ಇನ್ನು ಅಲ್ಲಿ ಸಮಸ್ಯೆಗಳು ತಾಂಡವಾಡುತ್ತಿವೆ ಎಂದು ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಹ್ಲಾದ್ ಜೋಶಿ ಗೆಲುವು ಸಾಧಿಸಿ ಬಂದು ಗ್ರಾಮೀಣ ಪ್ರದೇಶಗಳಲ್ಲಿ ಏನು ಕೊಡುಗೆ ನೀಡಿದ್ದಾರೆ. ಅವರ ಕೊಡುಗೆ ಶೂನ್ಯ ಅವರು ಸುಳ್ಳು ಭರವಸೆಯನ್ನೆ ಕೊಟ್ಟು ಅಧಿಕಾರಕ್ಕೆ ಬಂದಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಐದು ವರ್ಷದಲ್ಲಿ ಕೇಂದ್ರ ಸರ್ಕಾರದ ಎಷ್ಟು ಉದ್ಯೋಗ ನೀಡಿದ್ದಾರೆ, ರೈತರಿಗೆ ಏನೂ ಕೊಡುಗೆ ನೀಡಿದ್ದಾರೆ. ಯುಪಿಎ ಸರ್ಕಾರ ಇದ್ದಾಗ ಗೊಬ್ಬರದ ಹಣ 500 ರೂ ಇತ್ತು. ಇದೀಗ 1000 ರೂ ತಲುಪಿದೆ. ಮೋದಿ ನೇತೃತ್ವದ ಸರ್ಕಾರ ಕೇವಲ ಅದಾನಿ, ಅಂಬಾನಿಗೆ ಮಾತ್ರ ಸಬ್ಸಿಡಿ ನೀಡಿ ಅವರಿಗೆ ಲಾಭ ಮಾಡುತ್ತಿದೆ ಎಂದು ಆರೋಪ ಮಾಡಿದರು.

ರೈತರು ಬೆಳೆದ ಬೆಳೆಗೆ ಯೋಗ್ಯ ಬೆಲೆ ಸಿಗಬೇಕು ಇದಕ್ಕೆ ಯುಪಿಎ ಕೇಂದ್ರ ಸರ್ಕಾರ ಸ್ವಾಮಿನಾಥನ್ ಆಯೋಗ ರಚನೆ ಮಾಡಿತು.ಆದರೆ ಆ ಆಯೋಗ ಶಿಪಾರಸ್ಸು ಮಾಡಿದ ಯೋಜನೆಗಳು ಜಾರಿಗೆ ಬರುವ ಮುನ್ನ ಸರ್ಕಾರ ಬಿತ್ತು.ಆದರೆ ಎನ್ ಡಿಎ ಸರ್ಕಾರ ಈ ಸ್ವಾಮಿನಾಥನ್ ಆಯೋಗದ ವರದಿ ಜಾರಿ ಮಾಡಲು ಮುಂದೆ ಬರುತಿಲ್ಲ ಎಂದರು.

ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ತಾವು ಮಾಡಿದ ಸಾಧನೆಗಳನ್ನು ಜನಕ್ಕೆ ಹೇಳಿ ಮತಯಾಚನೆ ಮಾಡದೇ ಮೋದಿ ಮುಖ ನೋಡಿ ಬಿಜೆಪಿಗೆ ಮತಹಾಕುವಂತೆ ಕೇಳುತ್ತಿದ್ದಾರೆ. ಇದು ಮಗನ ಮುಖ ನೋಡದೇ ತಂದೆಯ ಮುಖ ನೋಡಿ ವಧು ಕೊಡುವ ರೀತಿಯಲ್ಲಿದೆ ಎಂದು ಇದೇ ವೇಳೆ ವ್ಯಂಗ್ಯವಾಡಿದರು. ಮಹದಾಯಿ ಯೋಜನೆ ಜಾರಿಯಲ್ಲಿ ಸಹ ಬಿಜೆಪಿಯ ತಾರತಮ್ಯ ಮಾಡುತಿದ್ದು, ಬಿಜೆಪಿಯ ಸಮಾವೇಶದಲ್ಲಿ ಗೋವಾ ಸಿಎಂ ಬರೆದಿರುವ ಪತ್ರ ಸಹ ನಕಲಿಯಾಗಿತ್ತು.

ನನಗೆ ಕಾಂಗ್ರೆಸ್ ಟಿಕೇಟ್ ನೀಡುವಾಗ ಶಾಕಿರ್ ಸನದಿ ಅವರಿಗೆ ಟಿಕೇಟ್ ನೀಡಲಾಗಿದೆ ಎಂದು ನಕಲಿಯಾಗಿತ್ತು. ಈ ಪತ್ರದ ಹಿಂದೆ ಸಹ ಬಿಜೆಪಿಯ ಷಡ್ಯಂತ್ತವಿದೆ ಎಂದು ಗಂಭೀರ ಆರೋಪ ಮಾಡಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ