ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ವಿನಾಯಕ ಜೋಷಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ. 28- ಬ್ಯಾಡ್ಮಿಂಟನ್ ತಾರೆ ವರ್ಷಾ ಬೆಳವಾಡಿಯವರೊಂದಿಗೆ ಸಪ್ತಪದಿ ತುಳಿಯುವ ಮೂಲಕ ಸ್ಯಾಂಡಲ್‍ವುಡ್ ನಟ ವಿನಾಯಕಜೋಷಿ ನವ ಜೀವನಕ್ಕೆ ಅಡಿಯಿಟ್ಟಿದ್ದಾರೆ.

ಕೊರೊನಾ ಹಿನ್ನೆಲೆಯಲ್ಲಿ ನಗರದ ಧರ್ಮಗಿರಿ ಮಂಜುನಾಥ ದೇಗುಲದಲ್ಲಿ ನಡೆದ ಸರಳ ವಿವಾಹದಲ್ಲಿ ವರ್ಷಾ ಹಾಗೂ ಜೋಷಿಯವರ ಕುಟುಂಬದವರು ಹಾಗೂ ಆಪ್ತ ಸ್ನೇಹಿತರಷ್ಟೇ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದರು.

ಮದುವೆ ಸಮಾರಂಭದಲ್ಲಿ 15 ರಿಂದ 55 ವರ್ಷದವರಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶ ನೀಡಿದ್ದು ವಿಶೇಷವಾಗಿತ್ತು. ರಾಷ್ಟ್ರ ಮಟ್ಟದ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿರುವ ವರ್ಷಾ ಬೆಳವಾಡಿ ವಿಶ್ವ ರ್ಯಾಂಕಿಂಗ್‍ನಲಕ್ಲಿ 120ನೇ ಸ್ಥಾನ ಪಡೆದಿದ್ದರು.

ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ವರ್ಷಾ ಹಾಗೂ ವಿನಾಯಕ ಜೋಷಿ ಬಾಲ್ಯ ಸ್ನೇಹಿತರಾಗಿದ್ದು ವಿವಾಹವಾಗುವ ಮೂಲಕ ಸತಿಪತಿಯಾಗಿದ್ದಾರೆ.

ಬಾಲನಟನಾಗಿ ಅಮೃತವರ್ಷಿಣಿ, ನಮ್ಮೂರ ಮಂದಾರ ಹೂವೇ, ಲಾಲಿ ಚಿತ್ರಗಳಲ್ಲಿ ಗಮನಸೆಳೆದಿದ್ದ ವಿನಾಯಕ ಜೋಷಿ, ಪುನೀತ್ ಅಭಿನಯದ ಅಪ್ಪು, ನಿನ್ನಿಂದಲೇ ಮುಂತಾದ ಚಿತ್ರಗಳಲ್ಲಿ ನಟನಾಗಿ ನಟಿಸಿದ್ದು ರೇಡಿಯೋ ಜಾಕಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

Facebook Comments

Sri Raghav

Admin