ಒಲಪಿಂಕ್‍ಗೆ ಅರ್ಹತೆ ಪಡೆದ ಕುಸ್ತಿ ಪಟು ವಿನಿಶ್ ಪೋಗಟ್

ಈ ಸುದ್ದಿಯನ್ನು ಶೇರ್ ಮಾಡಿ

ನೂರ್‍ಸುಲ್ತಾನ್ (ಖಜಕ್‍ಸ್ತಾನ್), ಸೆ.18- ಭಾರತದ ಹೆಮ್ಮೆಯ ಕುಸ್ತಿಪಟು ವಿನಿಶ್ ಪೋಗಟ್ (53 ಕೆಜಿ ವಿಭಾಗ) ಟೋಕಿಯೋದಲ್ಲಿ ನಡೆಯಲಿರುವ 2020ರ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಖಜಕಿಸ್ತಾನದ ನೂರ್‍ಸುಲ್ತಾನ್‍ನಲ್ಲಿಂದು ನಡೆದ ವಿಶ್ವ ಚಾಂಪಿಯನ್ ಕುಸ್ತಿ ಪಂದ್ಯವೊಂದರಲ್ಲಿ 25 ವರ್ಷದ ಪೋಗಟ್ ಅಮೆರಿಕದ ಪ್ರಬಲ ಪಟು ಸಾರಾ ಹಿಲ್ಡೆರಾಂಡ್ ಅವರನ್ನು 8-2ರಲ್ಲಿ ಮಣಿಸಿ ಒಲಿಂಪಿಕ್ ಅರ್ಹತೆಗೆ ಪಾತ್ರರಾದರು.

ವಿಶ್ವಚಾಂಪಿಯನ್‍ಶಿಪ್‍ನಲ್ಲಿ ರಜತ ಪದಕ ಗಳಿಸಿದ್ದ ಪ್ರಬಲ ಕುಸ್ತಿಪಟು ಸಾರಾ ಅವರನ್ನು ಮಣಿಸಿ ರೋಚಕ ಗೆಲುವು ಸಾಧಿಸಿರುವ ಪೋಗಟ್ ಇಂದು ರಾತ್ರಿ ನಡೆಯಲಿರುವ ಮತ್ತೊಂದು ಹಣಾಹಣಿಯಲ್ಲಿ ಗ್ರೀಸ್‍ನ ಮತ್ತೊಬ್ಬ ಪ್ರಬಲ ಪಟು ಮಾರಿಯಾ ಪ್ರಿವೋಲರಖಿ ಅವರನ್ನು ಕಂಚಿನ ಪದಕ್ಕಾಗಿ ಸೆಣೆಸಲಿದ್ದಾರೆ.

ಇದಕ್ಕೂ ಮುನ್ನ ನಡೆದ ಮೊದಲ ಸುತ್ತಿನಲ್ಲಿ ವಿನಿಶ್ ಪೋಗಟ್ ಉಕ್ರೇನ್‍ನ ಯುವಿಲಿಯಾ ಅವರನ್ನು 5-0 ಗೆಲುವಿನಿಂದ ಮುಂದಿನ ಹಂತ ಪ್ರವೇಶಿಸಿದರು.

Facebook Comments