ಮರಿ ಟೈಗರ್ ಗೆ ಭರ್ಜರಿ ಬರ್ತ್ಡೇ ಗಿಫ್ಟ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.3- ಸ್ಯಾಂಡಲ್‍ವುಡ್‍ನಲ್ಲಿ ಮರಿ ಟೈಗರ್ ಎಂದೇ ಬಿಂಬಿಸಿಕೊಂಡಿರುವ ವಿನೋದ್ ಪ್ರಭಾಕರ್ ಇಂದು ತಮ್ಮ 40ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು ಚಾಲೆಂಜಿಂಗ್ ಸ್ಟಾರ್ ಅಭಿನಯದ ರಾಬರ್ಟ್ ಚಿತ್ರತಂಡದಿಂದ ಭರ್ಜರಿ ಗಿಫ್ಟ್ ಸಿಕ್ಕಿದೆ.

ಫೋಸ್ಟರ್‍ನಲ್ಲಿ ರಗಡ್ ಲುಕ್‍ನಲ್ಲಿ ವಿನೋದ್ ಪ್ರಭಾಕರ್ ಬಾಯಿ ಮೇಲೆ ಗನ್ ಇಟ್ಟುಕೊಂಡು
ಸೈಲೆನ್ಸ್ ಎಂದು ಹೇಳುವ ರೀತಿ ಯಲ್ಲಿರುವ ಫೋಟೋ ವಿನೋದ್ ಪ್ರಭಾಕರ್ ಅಭಿಮಾನಿಗಳನ್ನು ರಂಜಿಸಿದೆ.

ವಿನೋದ್ ಪ್ರಭಾಕರ್ ಅವರ ರಗಡ್ ಲುಕ್ ಇರುವ ಫೋರ್ ಬಿಡುಗಡೆಯಾದರೂ ಈ ಚಿತ್ರದಲ್ಲಿ ವಿನೋದ್, ದರ್ಶನ್‍ರೊಂದಿಗೆ ಸಫೋರ್ಟ್ ಪಾತ್ರದಲ್ಲಿ ನಟಿಸುತ್ತಿದ್ದಾರೋ ಅಥವಾ ಎದುರಾಳಿಯಾಗಿ ನಟಿಸುತ್ತಿದ್ದಾರೋ ಎಂಬ ಕುತೂಹಲವನ್ನು ನಿರ್ದೇಶಕ ತರುಣ್ ಸುಧೀರ್ ಸೃಷ್ಟಿಸಿದ್ದಾರೆ.

ರಾಬರ್ಟ್ ಚಿತ್ರದಲ್ಲಿ ದರ್ಶನ್ ಮೊದಲ ಬಾರಿಗೆ ತ್ರಿಪಾತ್ರದಲ್ಲಿ ನಟಿಸಿದ್ದಾರೆ ಎಂದು ಹೇಳುತ್ತಿದ್ದು ಚಿತ್ರ ವೀಕ್ಷಿಸಲು 2021ರವರೆಗೂ ಕಾಯಲೇಬೇಕು. ವಿನೋದ್ ಪ್ರಭಾಕರ್ರ ಹುಟ್ಟುಹಬ್ಬದ ಅಂಗವಾಗಿ ರಾಬರ್ಟ್ ಚಿತ್ರತಂಡದೊಂದಿಗೆ ಹಲವು ಕಲಾವಿದರು, ತಂತ್ರಜ್ಞರು, ಅಭಿಮಾನಿಗಳು ಶುಭಾಶಯ ಕೋರಿದ್ದಾರೆ.

Facebook Comments