ವೈರಲ್ ಫ್ಲೂಗೂ ಲಸಿಕಾ ಆಂದೋಲನ : ಗೌರವ್ ಗುಪ್ತ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.18- ಇತ್ತೀಚೆಗೆ ಮಕ್ಕಳಲ್ಲಿ ವೈರಲ್ ಫ್ಲೂ ಹೆಚ್ಚುತ್ತಿರುವುದರಿಂದ ಫ್ಲೂ ಲಸಿಕಾ ಆಂದೋಲನ ಹಮ್ಮಿಕೊಳ್ಳುವ ಬಗ್ಗೆ ಮಾತುಕತೆ ನಡೆಸಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫ್ಲೂ ಬಗ್ಗೆ ಆತಂಕ ಬೇಡ ಎಂದು ತಿಳಿಸಿದರು.

ಮಕ್ಕಳಲ್ಲಿ ಫ್ಲೂ ಹೆಚ್ಚುತ್ತಿರುವ ಸಂಬಂಧ ಮಕ್ಕಳ ತಜ್ಞರೊಂದಿಗೆ ಚರ್ಚೆ ನಡೆಸಿದ್ದೇವೆ. ಸದ್ಯ ನಗರದಲ್ಲಿ ವೈರಲ್ ಫ್ಲೂ ಹೆಚ್ಚಾಗುತ್ತಿರುವುದು ಕಂಡು ಬಂದಿದೆ. ಕೊರನಾಗೂ ಫ್ಲೂಗೂ ವ್ಯತ್ಯಾಸವಿದೆ. ಆದರೆ, ಮಕ್ಕಳಲ್ಲಿ ಜ್ವರ ಕಾಣಿಸಿಕೊಂಡಾಗ ಕೋವಿಡ್ ಟೆ¸್ಟï ಮಾಡಬಹುದು ಎಂದು ತಿಳಿಸಿದರು.

ವೈರಲ್ ಫ್ಲೂಗಳಿಗಾಗಿ ಒಂದು ಲಸಿಕೆ ಅಭಿಯಾನ ಮಾಡುವ ಪ್ರಸ್ತಾವನೆಯನ್ನು ತಜ್ಞರ ಸಮಿತಿ ನೀಡಿದೆ. ಈ ಬಗ್ಗೆ ಮತ್ತಷ್ಟು ಚರ್ಚೆ ಆಗಬೇಕಿದೆ. ಈ ವಿಚಾರ ಇನ್ನೂ ಮಾತುಕತೆಯ ಹಂತದಲ್ಲಿದೆ. ಯಾವ ವಯಸ್ಸು ಹಾಗೂ ಯಾವಾಗ ಎಲ್ಲಿ ಕೊಡಬೇಕು ಎಂಬುದರ ಬಗ್ಗೆ ಚರ್ಚೆ ಹಾಗೂ ಪ್ರಸ್ತಾವನೆ ಸರ್ಕಾರದ ಮಟ್ಟದಲ್ಲಿದೆ ಎಂದರು.

# ಕೋವಿಡ್ ಲಸಿಕೆಗೆ 2178 ಕೇಂದ್ರಗಳ ಸ್ಥಾಪನೆ:

ನಗರದಲ್ಲಿ ಒಟ್ಟು 2178 ಕೇಂದ್ರಗಳನ್ನು ಕೋವಿಡ್ ಲಸಿಕೆ ನೀಡಲು ಸ್ಥಾಪಿಸಿಸಲಾಗಿದೆ. ಪ್ರತಿ ಸೆಂಟರ್‍ಗಳಲ್ಲಿಯೂ 200 ರಿಂದ 250 ಡೋಸ್ ಲಸಿಕೆ ನೀಡುವ ಉದ್ದೇಶವಿದೆ. 24 ಗಂಟೆಗಳಲ್ಲಿ ಒಟ್ಟು ಒಂದು ಲಕ್ಷ ಡೋಸ್ ಲಸಿಕೆ ನೀಡುವ ಸಿದ್ಧತೆಯಾಗಿದೆ. ಇದಕ್ಕಾಗಿ ಬಿಬಿಎಂಪಿ ಪೂರ್ವ ಭಾವಿ ಕೆಲಸ ಮಾಡಿಕೊಂಡಿದೆ ಎಂದು ಹೇಳಿದರು.

ಎಲ್ಲ ಎನ್‍ಜಿಒ ಸಂಸ್ಥೆ ಹಾಗೂ ಎಲ್ಲ ಕಮ್ಯುನಿಟಿ ಲೀಡರ್ ಗಳೊಂದಿಗೆ ಸಮನ್ವಯ ಸಭೆ ಮಾಡಲಾಗಿದೆ. ಬಿಬಿಎಂಪಿಗೆ ಇದು ಬಹಳ ಮಹತ್ವದ ಜವಾಬ್ದಾರಿ ರಾಜ್ಯ ಸರ್ಕಾರ ಸಹ ಇದಕ್ಕೆ ಸಹಕರಿಸಿದೆ ಎಂದು ತಿಳಿಸಿದರು. ಆದಷ್ಟು ಬೇಗ ವ್ಯಾಕ್ಸಿನೇಷನ್ ಎಲ್ಲರಿಗೂ ತಲುಪುವಂತೆ ಮಾಡವುದು ಈ ಲಸಿಕಾ ಮೇಳದ ಉದ್ದೇಶವಾಗಿದೆ. ಲಸಿಕಾ ಮೇಳಕ್ಕಾಗಿ ಮೆಗಾ ವ್ಯಾಕ್ಸಿನ್ ಸೆಂಟರ್‍ಗಳನ್ನು ಸಿದ್ಧಗೊಳಿಸಿದೆ. ಯಾವುದೇ ಬುಕಿಂಗ್ ಇಲ್ಲದೆ ವಾಕ್ ಇನ್ ಪ್ರೋಸಸ್ ಮೂಲಕ ವ್ಯಾಕ್ಸಿನ್ ಪಡೆಯಬಹುದು ಎಂದರು.

# ರಸ್ತೆ ಗುಂಡಿಗಳು:

ರಸ್ತೆ ಗುಂಡಿಗಳ ವಿಚಾರವಾಗಿ ಕಂದಾಯ ಸಚಿವ ಅಶೋಕ್ ಅವರೊಂದಿಗೆ ಸಹ ಒಂದು ಸುತ್ತಿನ ಚರ್ಚೆ ನಡೆದಿದೆ. ಇಂದು ಬೆಳಗ್ಗೆ ನಡೆದಿರುವ ಅನಾಹುತದ ಬಗ್ಗೆ ತನಿಖೆ ಮಾಡಲಾಗಿದೆ. ನಮಗೆ ಬಂದಿರುವ ಮಾಹಿತಿ ಪ್ರಕಾರ ಪೋಲ್‍ಗೆ ಡಿಕ್ಕಿಯಾಗಿ ಈ ಅಪಘಾತವಾಗಿದೆ ಎಂದು ಇದೇ ವೇಳೆ ಗೌರವ್ ಗುಪ್ತ ಪ್ರತಿಕ್ರಿಯಿಸಿದರು.

Facebook Comments