ದಾಖಲೆ ಬರೆಯಲು ಕೊಹ್ಲಿ ಸಜ್ಜು

ಈ ಸುದ್ದಿಯನ್ನು ಶೇರ್ ಮಾಡಿ

ಸಿಡ್ನಿ, ಅ.26- ದಶಕದ ಕ್ರಿಕೆಟಿಗರ ಸಾಲಿನಲ್ಲಿ ಅಗ್ರಮಾನ್ಯರಾಗಿರುವ ವಿರಾಟ್ ಕೊಹ್ಲಿ ಹತ್ತು ವರ್ಷಗಳಲ್ಲಿ ಹಲವಾರು ದಾಖಲೆಯನ್ನೂ ನಿರ್ಮಿಸಿದ್ದರೂ ನಾಳೆಯಿಂದ ಆರಂಭಗೊಳ್ಳಲಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ನಡೆಯುವ ಏಕದಿನ ಸರಣಿಯಲ್ಲೂ ದಾಖಲೆ ಮುರಿಯಲು ಸಜ್ಜಾಗಿದ್ದಾರೆ.

* ಏಕದಿನ ಕ್ರಿಕೆಟ್‍ನಲ್ಲಿ ಕೊಹ್ಲಿ ಈಗಾಗಲೇ 11,867 ರನ್ ಗಳಿಸಿದ್ದು ಆಸೀಸ್ ಸರಣಿಯಲ್ಲಿ 12 ಸಾವಿರ ಗುರಿ ತಲುಪುವತ್ತ ಹೆಜ್ಜೆ ಇಟ್ಟಿದ್ದಾರೆ.
* ಅತಿ ವೇಗವಾಗಿ 12 ಸಾವಿರ ರನ್ ಗಳಿಸಿದ ಆರನೇ ಆಟಗಾರ ಹಾಗೂ ವೇಗವಾಗಿ ಈ ಹಂತ (300 ಪಂದ್ಯ) ತಲುಪಿದ ಮೊದಲಿಗ ಎಂಬ ಕೀರ್ತಿಯೂ ಕೊಹ್ಲಿ ಹೆಸರಿಗೆ ಬರಲಿದೆ.
* ಆಸ್ಟ್ರೇಲಿಯಾ ವಿರುದ್ಧ ಸಚಿನ್‍ತೆಂಡೂಲ್ಕರ್ 9 ಶತಕ ಗಳಿಸಿದ್ದು ಈ ದಾಖಲೆಯನ್ನು ಮೀರುವ ಅವಕಾಶ ವಿರಾಟ್‍ಕೊಹ್ಲಿಗಿದೆ. ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ 8 ಶತಕ ಗಳಿಸಿದ್ದಾರೆ.

Facebook Comments