ಫೋಬ್ರ್ಸ್ ಪಟ್ಟಿಯಲ್ಲಿ ಕೊಹ್ಲಿಗೆ ಸ್ಥಾನ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮೇ 30- ಅತ್ಯಂತ ಶ್ರೀಮಂತ ಆಟಗಾರರ ಪಟ್ಟಿಯನ್ನು ಫೋಬ್ಸ್ ಪ್ರಕಟಿಸಿದ್ದು ವಿರಾಟ್ ಕೊಹ್ಲಿ ಏಕೈಕ ಭಾರತೀಯ ಕ್ರೀಡಾಪಟುವಾಗಿ ಗುರುತಿಸಿಕೊಂಡಿದ್ದಾರೆ. ವಿರಾಟ್ ಕೊಹ್ಲಿ 2019- 20ರಲ್ಲಿ 196 ಕೋಟಿ ರೂ. ಆದಾಯ ಗಳಿಸುವ ಮೂಲಕ 66ನೆ ಸ್ಥಾನ ಪಡೆದಿದ್ದರೆ,

ಸ್ವಿಸ್ ಆಟಗಾರ ರೋಜರ್ ಫೆಡರರ್( 802 ಕೋಟಿ ರೂ.), ಫುಟ್ಬಾಲ್ ಮಾಂತ್ರಿಕ ಕ್ರಿಸ್ಟಿಯಾನೋ ರೊನಾಲ್ಡೊ (793 ಕೋಟಿ ರೂ.), ಅಜೆಂಟೀನಾದ ಲಿಯೋನೆಲ್ ಮೆಸ್ಸಿ (785 ಕೋಟಿ ರೂ.) ಅವರನ್ನು ಹಿಂದಿಕ್ಕಿ ಟಾಪ್ 1 ಅತ್ಯಂತ ಶ್ರೀಮಂತ ಆಟಗಾರನಾಗಿ ಮೂಡಿಬಂದಿದ್ದಾರೆ. ಮಹಿಳೆಯರ ವಿಭಾಗದಲ್ಲಿ 284 ಕೋಟಿ ರೂ.ಗಳನ್ನು ಗಳಿಸುವ ಮೂಲಕ ಒಸಾಕಾ ನಂಬರ್1 ಸ್ಥಾನದಲ್ಲಿದ್ದರೆ, ಸೆರೆನಾ 33ನೇ ಸ್ಥಾನದಲ್ಲಿದ್ದಾರೆ.

Facebook Comments