ಐಪಿಎಲ್‍ಗೆ ಆರ್‌ಸಿಬಿ ಫುಲ್ ಫಿಟ್ : ವಿರಾಟ್ ಕೊಹ್ಲಿ

ಈ ಸುದ್ದಿಯನ್ನು ಶೇರ್ ಮಾಡಿ

ದುಬೈ,ಸೆ.12- ಐಪಿಎಲ್ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡುವ ನಿಟ್ಟಿನಲ್ಲಿ ನಮ್ಮ ತಂಡದ ಆಟಗಾರರು ದಷ್ಟಪುಷ್ಟವಾಗಿ ಸಮರ್ಥರಾಗಿದ್ದಾರೆ ಎಂದು ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ತಿಳಿಸಿದ್ದಾರೆ.

ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಸತತ ಐದು ತಿಂಗಳ ವಿರಾಮದ ನಂತರ ಸೆಪ್ಟೆಂಬರ್ 19ರಿಂದ ಐಪಿಎಲ್ ಪ್ರಾರಂಭವಾಗುತ್ತಿರುವ ಐಪಿಎಲ್‍ನಲ್ಲಿ ಸಮರ್ಥವಾಗಿ ಆಟವಾಡಲು ತಂಡ ಸಂಪೂರ್ಣ ಫಿಟ್ ಆಗಿದೆ ಎಂದು ಹೇಳಿದ್ದಾರೆ.

ಕ್ರೀಡೆ ಮತ್ತು ಆಟಗಳು ಸಮಚಿತ್ತತೆಯ ಮನೋಭಾವವನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತವೆ.ಯಾವುದೇ ವೈಫಲ್ಯಗಳು ಮತ್ತು ಹಿನ್ನಡೆಗಳನ್ನು ಸಮಾನಾಗಿ ಸ್ವೀಕರಿಸಲು ಈ ಸಮತೋಲನವು ಅವಶ್ಯಕವಾಗಿದೆ ಎಂದು ಹೇಳಿದ್ದಾರೆ.

Facebook Comments