ಸರಣಿ ಉಳಿಸಿಕೊಳ್ಳಲು ಕೊಹ್ಲಿ ಹುಡುಗರ ಸಾಹಸ

ಈ ಸುದ್ದಿಯನ್ನು ಶೇರ್ ಮಾಡಿ

ಸಿಡ್ನಿ, ಅ.26- ಕೊರೊನಾ ಹಾವಳಿಯಿಂದಾಗಿ ಸುಮಾರು 9 ತಿಂಗಳಿನಿಂದ ರಾಷ್ಟ್ರೀಯ ತಂಡದಿಂದ ದೂರವಾಗಿದ್ದ ಕೊಹ್ಲಿ ಹುಡುಗರು ಈಗ ಮತ್ತೆ ಒಂದಾಗಿ ನಾಳೆಯಿಂದ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಸರಣಿ ಗೆಲ್ಲಲು ಸಜ್ಜಾಗಿ ನಿಂತಿದ್ದಾರೆ. ಕಳೆದ ಬಾರಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ನೀಡಿ ಪ್ರಶಸ್ತಿ ಜಯಿಸಿದ್ದ ಕೊಹ್ಲಿ ಬಾಯ್ಸ್ ಈ ಬಾರಿಯೂ ಟ್ರೋಫಿ ಗೆಲ್ಲುವ ಸಾಹಸಕ್ಕೆ ಮುಂದಾಗಿದ್ದಾರೆ.

#ಕನ್ನಡಿಗರಿಗೆ ಉತ್ತಮ ಅವಕಾಶ:
ಆರಂಭಿಕ ಆಟಗಾರ ರೋಹಿತ್ ಶರ್ಮಾ ಅನುಪಸ್ಥಿತಿ ಯಲ್ಲಿ ಕನ್ನಡಿಗರಾದ ಕೆ.ಎಲ್.ರಾಹುಲ್, ಮಯಾಂಕ್ ಅಗರ್‍ವಾಲ್ ಅವರ ಪೈಕಿ ಒಬ್ಬರು ಶಿಖರ್ ಧವನ್‍ನೊಂದಿಗೆ ಬ್ಯಾಟಿಂಗ್ ಮಾಡುವ ಅವಕಾಶ ಪಡೆದಿದ್ದರೆ ಐಪಿಎಲ್‍ನಲ್ಲಿ ಉತ್ತಮ ಪ್ರದರ್ಶನ ತೋರಿರುವ ಮನೀಷ್‍ಪಾಂಡೆ ಕೂಡ ಆಡುವ 11ರಲ್ಲಿ ಸ್ಥಾನ ಗಿಟ್ಟಿಸುವ ಸೂಚನೆ ನೀಡಿದ್ದಾರೆ.

#ಯುವಕರಿಗೆ ಛಾನ್ಸ್:
ಆಸ್ಟ್ರೇಲಿಯಾದಲ್ಲಿ ಸರಣಿ ಗೆಲ್ಲುವ ಲೆಕ್ಕಾಚಾರದಲ್ಲಿ ತಂಡವನ್ನು ಆಯ್ಕೆ ಮಾಡಿರುವುದರಿಂದ ಈ ಬಾರಿ ಹಿರಿಯ ಆಟಗಾರರೊಂದಿಗೆ ಕಿರಿಯ ಆಟಗಾರರಿಗೂ ಟೀಂ ಇಂಡಿಯಾದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳುವ ಅವಕಾಶ ದೊರೆತಿದೆ. ಶುಭಮನ್‍ಗಿಲ್, ಸಂಜುಸಮ್ಸನ್, ಮಯಾಂಕ್ ಅಗರ್‍ವಾಲ್, ಶ್ರೇಯಾಸ್ ಅಯ್ಯರ್ ಅವರು ಉತ್ತಮ ಪ್ರದರ್ಶನ ನೀಡಿ ತಂಡದ ಖಾಯಂ ಆಟಗಾರರಾಗುವತ್ತ ಚಿತ್ತ ಹರಿಸಿದ್ದಾರೆ.

#ಬಲಿಷ್ಠ ತಂಡ:
ವಿರಾಟ್ ಕೊಹ್ಲಿ ಸಾರಥ್ಯದ ಟೀಂ ಇಂಡಿಯಾವು ಈ ಬಾರಿ ಬಲಿಷ್ಠ ತಂಡವಾಗಿ ದ್ದು ಬ್ಯಾಟಿಂಗ್‍ನಲ್ಲಿ ವಿರಾಟ್ ಕೊಹ್ಲಿ, ಶಿಖರ್‍ಧವನ್, ಕೆ.ಎಲ್.ರಾಹುಲ್, ಹಾರ್ದಿಕ್ ಪಾಂಡ್ಯರಂತಹ ಆಟಗಾರರಿದ್ದರೆ, ಬೌಲಿಂಗ್ ಪಡೆಯನ್ನು ಅನುಭವಿಗಳಾದ ರವೀಂದ್ರಾಜಡೇಜಾ, ಬೂಮ್ರಾ,ಮೊಹಮ್ಮದ್‍ಶಮಿ, ಚಹಲ್, ಕುಲ್‍ದೀಪ್ ಯಾದವ್ ಬಲಿಷ್ಠಗೊಳಿಸುವ ಹೊಣೆ ಹೊತ್ತಿದ್ದರೆ ಇವರಿಗೆ ಸಾಥ್ ನೀಡಲು ಸೈನಿ, ಶಾರ್ದೂಲ್ ಠಾಕೂರ್ ಇದ್ದಾರೆ.

#ಸೋಲಿಗೆ ಮುಯ್ಯಿ ಹೇಳಲು ರೆಡಿ:
ಕಳೆದ ಬಾರಿಯ ಸೋಲಿಗೆ ಮುಯ್ಯಿಗೆ ಮುಯ್ಯಿ ಹೇಳಲು ಸಜ್ಜಾಗಿರುವ ಆರೋನ್ ಫಿಂಚ್ ಸಾರಥ್ಯದ ಆಸ್ಟ್ರೇಲಿಯಾ ತಂಡವು ಈ ಬಾರಿ ಭಾರತ ವಿರುದ್ಧ ಸರಣಿ ಗೆಲ್ಲುವ ಛಲ ತೊಟ್ಟಿದೆ.

ಸರಣಿ ಗೆಲ್ಲುವಂತಹ ಸ್ಟಾರ್ ಆಟಗಾರರೇ ತಂಡದಲ್ಲಿದ್ದು ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಬಲಿಷ್ಠವಾಗಿದೆ. ಎಂತಹ ಕ್ಲಿಷ್ಟ ಸಮಯದಲ್ಲೂ ರನ್ ವೇಗ ಹೆಚ್ಚಿಸುವ ಚಾಕಚಕ್ಯತೆ ಹೊಂದಿರುವ ಡೇವಿಡ್ ವಾರ್ನರ್, ಆರೋನ್ ಫಿಂಚ್, ಮಾರ್ಕಸ್ ಸ್ಟೋನಿಸ್, ಗ್ಲೇನ್ ಮ್ಯಾಕ್ಸ್‍ವೆಲ್, ಸ್ಟೀವ್ ಸ್ಮಿತ್ ಇದ್ದರೆ, ಎದುರಾಳಿ ಬ್ಯಾಟ್ಸ್‍ಮನ್‍ಗಳ ರನ್ ದಾಹಕ್ಕೆ ಕಡಿವಾಣ ಹಾಕುವಂತೆ ಚಮತ್ಕಾರಿ ಬೌಲಿಂಗ್ ಮಾಡುವ ಸಮರ್ಥವನ್ನು ಮಿಚಲ್ ಸ್ಟ್ರಾಕ್, ಪ್ಯಾಟ್ ಕಮ್ಮಿನ್ಸ್, ಜೋಸ್ ಹೆಜಲ್‍ವುಡ್, ಆ್ಯಡಂ ಜಂಪಾ ಇರುವುದರಿಂದ ಭಾರತ ಹಾಗೂ ಆಸ್ಟ್ರೇಲಿಯಾ ಸರಣಿಯು ಸಾಕಷ್ಟು ಕುತೂಹಲ ಮೂಡಿಸಿದೆ.

#ಸರಣಿ ವಿವರ:
ಮೊದಲ ಏಕದಿನ: 27 ನವೆಂಬರ್- ಸಿಡ್ನಿ
2ನೇ ಏಕದಿನ:29 ನವೆಂಬರ್-ಸಿಡ್ನಿ
ಮೂರನೇ ಏಕದಿನ:2 ಡಿಸೆಂಬರ್- ಕ್ಯಾನ್‍ಬೆರಾ

Facebook Comments