ನನ್ನ ಸಾಧನೆಗೆ ಕೊಹ್ಲಿ, ಎಬಿಡಿ ಕಾರಣ : ಮ್ಯಾಕ್ಸ್ ವೆಲ್

ಈ ಸುದ್ದಿಯನ್ನು ಶೇರ್ ಮಾಡಿ

ಮೆಲ್ಬೋರ್ನ್,ಅ.20- ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ಎಬಿಡಿ ಅವರೊಂದಿಗೆ ಕಾಲ ಕಳೆಯುವಾಗ ನಾನು ಹತ್ತು ಅಡಿ ಬೆಳೆದಿದ್ದೇನೆ ಎಂಬ ಭಾವನೆ ಬರುತ್ತಿತ್ತು ಎಂದು ಆಸ್ಟ್ರೇಲಿಯಾದ ಅಲ್‍ರೌಂಡರ್ ಗ್ಲೇನ್ ಮ್ಯಾಕ್ಸ್‍ವೆಲ್ ಅಭಿಪ್ರಾಯಪಟ್ಟಿದ್ದಾರೆ. ಐಪಿಎಲ್‍ನ ಹಿಂದಿನ ಸರಣಿಗಳಲ್ಲಿ ಅಷ್ಟೇನೂ ಸಾಧನೆ ಮಾಡದ ಮ್ಯಾಕ್ಸ್‍ವೆಲ್ ಈ ಬಾರಿಯ ಐಪಿಎಲ್‍ನಲ್ಲಿ ಆರ್‍ಸಿಬಿ ಪರ ಅಮೋಘ ಆಟವಾಡಿ ಗಮನ ಸೆಳೆದಿದ್ದರು.

ನನ್ನಿಂದ ಇಂತಹ ಆಟ ಹೊರ ಹೊಮ್ಮಲು ದಿಗ್ಗಜ ಕ್ರಿಕೆಟಿಗರಾದ ಮತ್ತು ಎಬಿಡಿ ಅವರು ನನ್ನೊಂದಿಗೆ ಇದ್ದಿದ್ದೇ ಕಾರಣ ಎಂದು ಮ್ಯಾಕ್ಸ್‍ವೆಲ್ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ. ಕೊಹ್ಲಿ ಮತ್ತು ಎಬಿಡಿ ಅವರೊಂದಿಗೆ ಅಂಕಣದಲ್ಲಿ ಪ್ರಾಕ್ಟಿಸ್ ಮಾಡುವಾಗ ಮತ್ತು ಅವರೊಂದಿಗೆ ಕಾಲ ಕಳೆಯುವಾಗ ನನಗೆ 10 ಅಡಿ ಉದ್ದ ಬೆಳೆದಿದ್ದೇನೆ ಎಂಬ ಭಾವನೆ ಕಾಡುತಿತ್ತು ಎಂದಿದ್ದಾರೆ.

ಆ ಇಬ್ಬರು ಮಹಾನ್ ಆಟಗಾರರಿಂದ ನಾನು ಪ್ರತಿನಿತ್ಯ ಹೊಸತನ ಕಲಿಯುತ್ತಿದ್ದೆ, ಅವರಿಬ್ಬರು ನಡೆಸುವ ಅಭ್ಯಾಸವನ್ನು ನಾನು ತದೇಕಚಿತ್ತದಿಂದ ನೋಡುತ್ತಿದ್ದೆ. ನನ್ನ ಈ ಅನುಭವವೇ ಐಪಿಎಲ್‍ನಲ್ಲಿ ಸಿಡಿದೇಳಲು ಸಾಧ್ಯವಾಯಿತು ಎಂದು ಮ್ಯಾಕ್ಸ್‍ವೆಲ್ ಹೇಳಿದ್ದಾರೆ.

Facebook Comments