ವಿರಾಟ್ ಕೊಹ್ಲಿ ನಿರ್ಧಾರಗಳಿಂದಲೇ ಸೋಲು : ನೆಹ್ರಾ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ನ.30- ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಬೌಲಿಂಗ್ ಬಗ್ಗೆ ಸರಿಯಾದ ತೀರ್ಮಾನ ಕೈಗೊಳ್ಳದಿರುವುದೇ ಆಸ್ಟ್ರೇಲಿಯಾ ವಿರುದ್ಧ ಭಾರತ 2ನೇ ಪಂದ್ಯವನ್ನು ಸೋತು ಸರಣಿ ಕೈಚೆಲ್ಲಿದೆ ಎಂದು ಟೀಂ ಇಂಡಿಯಾದ ಮಾಜಿ ಆಟಗಾರ ಆಶೀಶ್ ನೆಹ್ರಾ ಸುದ್ದಿಗಾರರಿಗೆ ತಿಳಿಸಿದರು.

ಆಸ್ಟ್ರೇಲಿಯಾ ಬ್ಯಾಟ್ಸ್‍ಮನ್‍ಗಳ ರನ್ ಅಬ್ಬರವನ್ನು ನಿಯಂತ್ರಿಸಲು ಕೊಹ್ಲಿ ತಂಡದಲ್ಲಿರುವ ಅರೆ ಕಾಲಿಕ ಬೌಲರ್‍ಗಳ ಮೊರೆ ಹೋಗಿ ಮಯಾಂಕ್ ಅಗರ್‍ವಾಲ್‍ಗೂ ಬಾಲ್ ನೀಡಿದ್ದರು.

ಆದರೆ ತಂಡದಲ್ಲಿ 5ನೇ ಬೌಲರ್ ಆಗಿರುವ ಹಾರ್ದಿಕ್ ಪಾಂಡ್ಯಗೆ ಕೇವಲ 4 ಓವರ್ ಮಾಡುವ ಅವಕಾಶ ನೀಡಿದ್ದರು. ಆದರೆ ಆಸೀಸ್ ನಾಯಕ ಫಿಂಚ್ ತನ್ನಲ್ಲಿರುವ ಬೌಲರ್‍ಗಳನ್ನು ಸರಿಯಾಗಿ ಬಳಸಿಕೊಂಡಿದ್ದರಿಂದಲೇ ಗೆಲುವು ಸಾಧಿಸಿದೆ ಎಂದರು.

Facebook Comments