ವಿರಾಟ್ ಕೋಹ್ಲಿಗೆ ದಂಡ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜೂ.8- ಇಂಗ್ಲೆಂಡ್‍ನಲ್ಲಿ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್‍ನಲ್ಲಿ ವಿರಾಟ್‍ಕೋಹ್ಲಿ ಅವರು ಭಾರತ ತಂಡದ ಸಾರಥ್ಯ ವಹಿಸಿ ಚಾಂಪಿಯನ್ ಪಟ್ಟ ಗೆಲ್ಲುವತ್ತ ಗಮನ ಹರಿಸಿದರೆ. ಗುರಗಾಂವ್‍ನ ನಗರಸಭೆ ಅಧಿಕಾರಿಗಳು ಕಾರನ್ನು ತೊಳೆಯಲು ನೀರು ಪೊಲು ಮಾಡಿದ ಹಿನ್ನೆಲೆಯಲ್ಲಿ 500 ರೂ. ದಂಡ ವಿಧಿಸಿ ನೋಟಿಸ್ ನೀಡಿದ್ದಾರೆ.

ಕೊಹ್ಲಿ ಅವರು ಗುರ್ಗಾಂವ್‌ನ ಡಿಎಲ್‌ಎಫ್‌ ಫೇಸ್‌ 1ನಲ್ಲಿ ನಿವಾಸ ಹೊಂದಿದ್ದಾರೆ. ಕೆಲಸದವರೊಬ್ಬರು ಕೊಹ್ಲಿಯ ಕಾರನ್ನು ಕುಡಿಯುವ ನೀರಿನಿಂದ ತೊಳೆದರು ಎನ್ನುವುದು ನಗರಪಾಲಿಕೆ ಗಮನಕ್ಕೆ ಬಂದಿದೆ. ಕೂಡಲೇ 500 ರೂ. ದಂಡ ಹಾಕಿ, ಹಾಗೆ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. ದಂಡ ಹಾಕಿದ ಕೂಡಲೇ ಅವರ ಸಿಬಂದಿ ಕೂಡಲೇ ಅದನ್ನು ಪಾವತಿ ಮಾಡಿದ್ದಾರೆಂದು ಹೇಳಲಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ