ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲೂ ಕ್ರೀಡಾ ಸ್ಫೂರ್ತಿ ಮೆರೆದ ಕೊಹ್ಲಿ
ಮ್ಯಾಂಚೆಸ್ಟರ್, ಜೂ.17- ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹಲವು ಬಾರಿ ತಮ್ಮ ಕ್ರೀಡಾ ಸ್ಫೂರ್ತಿಯನ್ನು ಮೆರೆದಿದ್ದು, ನಿನ್ನೆ ನಡೆದ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲೂ ಕೂಡ ಅದನ್ನು ಪುನರಾವರ್ತಿಸಿದ್ದಾರೆ.
ಪಾಕಿಸ್ತಾನದ ವಿರುದ್ಧ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮೂಲದ ಕ್ರೀಡಾಂಗಣದಲ್ಲಿ ನೆರೆದಿದ್ದ ಅಪಾರ ಕ್ರೀಡಾಭಿಮಾನಿಗಳನ್ನು ರಂಜಿಸಿದ್ದ ವಿರಾಟ್ ಕೊಹ್ಲಿ , ಪಾಕ್ನ ವೇಗಿ ಮೊಹಮ್ಮದ್ ಅಮೀರ್ರ ಬೌಲಿಂಗ್ನಲ್ಲಿ ಚೆಂಡು ಬ್ಯಾಟ್ಗೆ ತಗುಲಿದೆ ಎಂದು ಅರಿತ ವಿರಾಟ್ ಕೊಹ್ಲಿ ಅಂಪೈರ್ ತಮ್ಮ ನಿರ್ಣಯವನ್ನು ಕೊಡುವ ಮುನ್ನವೇ ಮೈದಾನದಿಂದ ಹೊರ ನಡೆಯುವ ಮೂಲಕ ಕ್ರೀಡಾ ಸ್ಫೂರ್ತಿಯನ್ನು ಮೆರೆದಿದ್ದರು.
ಡ್ರೆಸಿಂಗ್ರೂಮ್ನಲ್ಲಿ ತಾನು ಔಟಾದ ರೀತಿಯನ್ನು ಸೂಕ್ಷ್ಮವಾಗಿ ಗಮನಿಸಿದ ವಿರಾಟ್ ಕೊಹ್ಲಿ ಚೆಂಡು ಬ್ಯಾಟಿಗೆ ತಗುಲದಿರುವುದು ಸ್ಪಷ್ಟವಾಗಿ ಗೋಚರಿಸಿದೆ. ಕೊಹ್ಲಿ ಈ ಆತುರದ ನಿರ್ಧಾರದಿಂದ ಭಾರತ 350 ರನ್ಗಳನ್ನು ಗಳಿಸುವ ಅವಕಾಶವನ್ನು ಕಳೆದುಕೊಂಡಿತ್ತಾದರೂ, ಕೊಹ್ಲಿ ವೇಗದ 11 ಸಾವಿರ ರನ್ ಗಳಿಸಿದ್ದು ಹಾಗೂ ಪಾಕ್ ವಿರುದ್ಧ ಭಾರತ ಜಯಿಸಿದ್ದು ಆ ನೋವನ್ನು ಮರೆಮಾಚಿತು.
ಸಚಿನ್ ತೆಂಡೂಲ್ಕರ್ ಕೂಡ ಹಲವು ಬಾರಿ ಅಂಪೈರ್ಗಳ ತೀರ್ಪಿಗೆ ಕಾಯದೆ ಮೈದಾನ ತೊರೆದಿದ್ದರು, ಇನ್ನೂ ಮುಂದಾದರೂ ವಿರಾಟ್ ಕೊಹ್ಲಿ ಮೈದಾನದ ತೊರೆಯುವ ಮುನ್ನ ಅಂಪೈರ್ಗಳ ನಿರ್ಣಯಕ್ಕೆ ಕಾಯುವಂತಾಗಲಿ.