ಶತಕ ಗಳಿಸುವುದಾಗಿ ಎಬಿಡಿಗೆ ವಚನ ನೀಡಿದ್ದರಂತೆ ಕೊಹ್ಲಿ

ಈ ಸುದ್ದಿಯನ್ನು ಶೇರ್ ಮಾಡಿ

ಕೋಲ್ಕತ್ತಾ, ಏ. 20- ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಶತಕ ಗಳಿಸುತ್ತೇನೆ ಎಂದು ತನ್ನ ಸ್ನೇಹಿತ ಹಾಗೂ ತಂಡದ ಸದಸ್ಯ ಎಬಿಡಿವಿಲಿಯರ್ಸ್‍ಗೆ ವಚನ ನೀಡಿದ್ದೆ ಎಂದು ಆರ್‍ಸಿಬಿ ನಾಯಕ ವಿರಾಟ್ ಕೊಹ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮಾಡು ಇಲ್ಲವೇ ಮಡಿ ಎಂಬಂತಿದ್ದ ಕೋಲ್ಕತ್ತಾ ನೈಟ್‍ರೈಡರ್ಸ್ ಪಂದ್ಯದಲ್ಲಿ ಶತಕ ಗಳಿಸಿದ ನಂತರ ಪ್ರತಿಕ್ರಿಯಿಸಿದ ಕೊಹ್ಲಿ, ನಾನು ಹೊಟೇಲ್ ಬಿಟ್ಟು ಮೈದಾನಕ್ಕೆ ತೆರಳುವಾಗ ಇಂದಿನ ಪಂದ್ಯದಲ್ಲಿ ನಾನು ಶತಕ ಸಿಡಿಸುತ್ತೇನೆ ಎಂದು ಎಬಿಡಿಗೆ ವಚನ ನೀಡಿದ್ದೆ ಅದರಂತೆ ನಾನು ಶತಕ ಬಾರಿಸಿರುವುದು ಹಾಗೂ ಪಂದ್ಯ ಗೆದ್ದಿರುವುದು ನನ್ನ ಸಂತಸವನ್ನು ಹೆಚ್ಚಿಸಿದೆ ಎಂದು ಕೊಹ್ಲಿ ಹೇಳಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ