ಟ್ವೆಂಟಿ-20ಯಲ್ಲಿ ಮಂಕಾದ ವಿರಾಟ್ ಕೊಹ್ಲಿ

ಈ ಸುದ್ದಿಯನ್ನು ಶೇರ್ ಮಾಡಿ

viratಗಬ್ಬ, ನ.21- ಕ್ರಿಕೆಟ್‍ನ ಎಲ್ಲ ಮಾದರಿಯಲ್ಲೂ ದಾಖಲೆಗಳನ್ನು ನಿರ್ಮಿಸಿ ತ್ರಿವಿಕ್ರಮನಂತೆ ಬಿಂಬಿಸಿಕೊಂಡಿರುವ ವಿರಾಟ್ ಕೊಹ್ಲಿ ಇಂದಿಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾದ ಮೊದಲ ಟ್ವೆಂಟಿ-20ಯಲ್ಲಿ ತಮ್ಮ ಎಂದಿನ ಚಾರ್ಮ್ ಅನ್ನು ಕಳೆದುಕೊಂಡಂತೆ ಕಂಡುಬಂದರು. ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ವಿರಾಟ್ ಕೊಹ್ಲಿ ಫೀಲ್ಡಿಂಗ್‍ನಲ್ಲಿ ಪದೇ ಪದೇ ಎಡುವ ಮೂಲಕ ಆಸ್ಟ್ರೇಲಿಯಾ 4 ವಿಕೆಟ್‍ಗೆ 17 ಓವರ್‍ಗಳಲ್ಲಿ 158 ರನ್‍ಗಳಿಸಲು ಶಕ್ತವಾಯಿತು.

ಪಂದ್ಯದ 4ನೆ ಓವರ್‍ನಲ್ಲಿ ಬ್ರೂಮಾ ಬೌಲಿಂಗ್‍ನಲ್ಲಿ ಆರೋನ್‍ಫಿಂಚ್‍ನ ಕ್ಯಾಚ್ ಬಿಟ್ಟ ಕೊಹ್ಲಿ, ನಂತರ 13ನೆ ಮಾರ್ಕ್ ಸ್ಟೋನೀಸ್ ಚೆಂಡನ್ನು ಬೌಂಡರಿಗೆರೆಗಟ್ಟುವಾಗ ಕೊಹ್ಲಿ ಅದನ್ನು ತಡೆಯಲು ಎಡವಿ ಕೇವಲ 1 ರನ್ ಇದ್ದ ಸ್ಥಾನದಲ್ಲಿ 3 ರನ್ ಬಿಟ್ಟುಕೊಡುವ ಮೂಲಕ ಕಳಪೆ ಫೀಲ್ಡಿಂಗ್‍ನಿಂದ ಮತ್ತೊಮ್ಮೆ ಪ್ರೇಕ್ಷಕರ ಕೆಂಗಣ್ಣಿಗೆ ಗುರಿಯಾದರು.
ಅಲ್ಲದೆ ಬ್ಯಾಟಿಂಗ್‍ನಲ್ಲೂ ಮಂಕಾದ ವಿರಾಟ್ ಕೊಹ್ಲಿ ಕೇವಲ 4 ರನ್ ಗಳಿಸಿ ಜಂಪಾಗೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದ್ದೇ ಅಲ್ಲದೆ ಟೀಂ ಇಂಡಿಯಾ ಸೋಲಿನ ಭೀತಿಗೆ ತಲುಪಿದೆ.

Facebook Comments