ವಿಶ್ವಕಪ್ ಗೆಲ್ಲುವ ತಂಡವನ್ನು ಹೆಸರಿಸಿದ ಸೆಹ್ವಾಗ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಅ. 28- ಈ ಬಾರಿಯ ಚುಟುಕು ವಿಶ್ವಕಪ್‍ನಲ್ಲಿ ಹಲವು ವಿಸ್ಮಯಗಳು ನಡೆಯುವ ಮೂಲಕ ಪಂದ್ಯಗಳು ರೋಚಕತೆಯನ್ನು ಮೂಡಿಸಿದ್ದರೂ ಕೂಡ ಭಾರತ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಈ ತಂಡವು ಚುಟುಕು ವಿಶ್ವಕಪ್ ಅನ್ನು ಎತ್ತಿ ಹಿಡಿಯುತ್ತದೆ ಎಂಬ ವಿಶ್ವಾಸದ ಮಾತುಗಳನ್ನು ಆಡಿದ್ದಾರೆ.

ವಿಶ್ವಕಪ್‍ನಲ್ಲಿ ಭಾರತದ ಅಜೇಯ ಓಟಕ್ಕೆ ಪಾಕಿಸ್ತಾನವು ಬ್ರೇಕ್ ಆಗಿದ್ದರೆ, ಹಾಲಿ ವಿಶ್ವಚಾಂಪಿಯನ್ ವೆಸ್ಟ್‍ಇಂಡೀಸ್ ವಿರುದ್ಧ ಇಂಗ್ಲೆಂಡ್ ತಂಡವು ಚುಟುಕು ವಿಶ್ವಕಪ್‍ನಲ್ಲಿ ಮೊದಲ ಗೆಲುವು ದಾಖಲಿಸುವ ಮೂಲಕ ಸೋಲಿನ ಸರಪಳಿಯನ್ನು ಕಳೆದುಕೊಂಡಿದೆ.

ಪಾಕಿಸ್ತಾನ ಹಾಗೂ ಇಂಗ್ಲೆಂಡ್‍ಗಳು ಸೆಮಿಫೈನಲ್ ತಲುಪುವುದು ಈಗಾಗಲೇ ನಿಶ್ಚಯವಾಗಿದ್ದರೂ ಕೂಡ ವೀರೇಂದ್ರ ಸೆಹ್ವಾಗ್ ಪ್ರಕಾರ ಈ ಎರಡು ತಂಡಗಳು ವಿಶ್ವ ಚಾಂಪಿಯನ್ ಆಗುವುದಿಲ್ಲ ಬದಲಿಗೆ ಬೇರೆ ತಂಡಕ್ಕೆ ಆ ಪಟ್ಟ ದೊರಕಲಿದೆ ಎಂದು ಹೇಳಿದ್ದಾರೆ.

ಮುಂದಿನ ಭಾನುವಾರ ನಡೆಯಲಿರುವ ಭಾರತ ಹಾಗೂ ನ್ಯೂಜಿಲ್ಯಾಂಡ್ ತಂಡಗಳ ನಡುವಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ತಂಡವು ಗೆಲುವು ಸಾಸಿದರೆ ಟೀಂ ಇಂಡಿಯಾ ಸೆಮಿಫೈನಲ್‍ಗೆ ಹೋಗುವುದು ಖಚಿತವಾಗುತ್ತದೆ. ಒಂದು ವೇಳೆ ಭಾರತ ತಂಡವು ಸೆಮಿಫೈನಲ್ ತಲುಪಿದರೆ ಈ ಬಾರಿಯ ವಿಶ್ವ ಚಾಂಪಿಯನ್ ಆಗುವ ತಂಡವಾಗಿ ಹೊರಹೊಮ್ಮಲಿದೆ ಎಂದು ವೀರೇಂದ್ರ ಸೆಹ್ವಾಗ್ ಭವಿಷ್ಯ ನುಡಿದಿದ್ದಾರೆ.

ಪಾಕಿಸ್ತಾನ ವಿರುದ್ಧ ಭಾರತ ತಂಡ ಸೋಲು ಕಂಡಿದ್ದರೂ ಕೂಡ ಮುಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನವನ್ನು ತೋರುವ ಮೂಲಕ ಸೆಮಿಫೈನಲ್‍ಗೇರುತ್ತದೆ ಎಂಬ ವಿಶ್ವಾಸ ನನ್ನಲ್ಲಿದೆ, ನಾವು ತಂಡ ಗೆದ್ದಾಗ ಅದರ ಸಂಭ್ರಮದಲ್ಲಿ ಹೇಗೆ ಪಾಲ್ಗೊಳ್ಳುತ್ತೇವೆಯೋ ಅದೇ ರೀತಿ ತಂಡ ಸೋತಾಗಲೂ ಸೋಲನ್ನು ಬೆಟ್ಟು ಮಾಡದೆ ಆಟಗಾರರನ್ನು ಹುರಿದುಂಬಿಸುವ ಕೆಲಸವಾಗಬೇಕು ಎಂದು ಸೆಹ್ವಾಗ್ ತಿಳಿಸಿದ್ದಾರೆ.

Facebook Comments