ರಾಮಮಂದಿರ ನಿರ್ಮಾಣಕ್ಕೆ ಧರ್ಮಸ್ಥಳದಿಂದ 25 ಲಕ್ಷ ದೇಣಿಗೆ : ವೀರೇಂದ್ರ ಹೆಗ್ಗಡೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಳ್ತಂಗಡಿ,ಜ.14- ಅನಂತ ಸದ್ಗುಣಗಳ ಆದರ್ಶ ವ್ಯಕ್ತಿಯೇ ಶ್ರೀರಾಮ. ಎಲ್ಲಾ ದುರ್ಗುಣಗಳನ್ನು ತ್ಯಜಿಸಿ ಎಲ್ಲರೂ ಸದ್ಗುಣಗಳನ್ನು ಮೈಗೂಡಿಸಿಕೊಳ್ಳುವುದೇ ರಾಮ ಮಂದಿರ ನಿರ್ಮಾಣದ ಉದ್ದೇಶವಾಗಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಮೂಲಕ ನಮ್ಮ ಇಂದಿನ ಪ್ರಜಾರಾಜ್ಯದಲ್ಲಿ ರಾಮರಾಜ್ಯದ ಕನಸು ನನಸಾಗಬೇಕು ಎಂದು ಉಡುಪಿ ಪೇಜಾವರದ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಧರ್ಮಸ್ಥಳದಲ್ಲಿ ಶ್ರೀ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಸಮಿತಿಯ ನಿಧಿ ಸಮರ್ಪಣಾ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ತಾಯಿ ಮತ್ತು ಜನ್ಮ ಭೂಮಿ ಸ್ವರ್ಗಕ್ಕಿಂತಲೂ ಮಿಗಿಲಾದುದು. ಪ್ರತಿ ಮನೆಯಲ್ಲಿಯೂ ಮುಂಜಾನೆ ಮತ್ತು ಮುಸ್ಸಂಜೆ ಪ್ರತಿಯೊಬ್ಬರೂ ರಾಮನಾಮ ಸ್ಮರಣೆ ಮಾಡಬೇಕು. ತನ್ಮೂಲಕ ಧರ್ಮ ಮತ್ತು ಸಂಸ್ಕøತಿಯ ಪುನರುತ್ಥಾನವಾಗಿ ರಾಮರಾಜ್ಯ ರೂಪುಗೊಳ್ಳಬೇಕೆಂದು ಹಾರೈಸಿದರು.

ನಾಳೆ(ಜ.14)ಯಿಂದ ಫೆ.25ರ ವರೆಗೆ ನಿಧಿ ಸಮರ್ಪಣಾ ಅಭಿಯಾನ ಆಯೋಜಿಸಿದ್ದು, ಹತ್ತು , ನೂರು ಹಾಗೂ 1000 ರೂ. ನ ಕೂಪನ್‍ಗಳ ಮೂಲಕ ಸಾರ್ವಜನಿಕರು ದೇಣಿಗೆ ನೀಡಬಹುದು. ವಿಶ್ವ ಹಿಂದೂ ಪರಿಷದ್ ಕಾರ್ಯಕರ್ತರು ಮನೆಗಳಿಗೆ ಭೇಟಿ ನೀಡಿ ದೇಣಿಗೆ ಸಂಗ್ರಹಿಸುವರು ಎಂದರು. ಅಯೋಧ್ಯೆಯಲ್ಲಿ 500 ಕೋಟಿ ರೂ. ವೆಚ್ಚದಲ್ಲಿ ರಾಮ ಮಂದಿರ ನಿರ್ಮಾಣ ಹಾಗೂ ಪ್ರವಾಸಿಗರಿಗೆ ವಸತಿ ಗ್ರಂಥಾಲಯ ಮೊದಲಾದ ಸೌಲಭ್ಯಗಳಿಗಾಗಿ 1000 ಕೋಟಿ ರೂ. ವೆಚ್ಚದ ಕಾಮಗಾರಿ ಹಮ್ಮಿಕೊಳ್ಳಲಾಗಿದೆ ಎಂದು ಸ್ವಾಮೀಜಿ ತಿಳಿಸಿದರು.

# ಧರ್ಮಸ್ಥಳದಿಂದ 25 ಲಕ್ಷ ದೇಣಿಗೆ:
ನಿಧಿ ಸಮರ್ಪಣೆಗೆ ಚಾಲನೆ ನೀಡಿದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳದ ವತಿಯಿಂದ 25 ಲಕ್ಷ ರೂ. ದೇಣಿಗೆ ನೀಡುವುದಾಗಿ ಪ್ರಕಟಿಸಿದರು. ಮುಂದೆ ಶ್ರೀ ಸ್ವಾಮಿಯ ಪ್ರೇರಣೆಯಂತೆ ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.  ಸರ್ವರೂ ಸಕ್ರಿಯ ಸಹಕಾರ ನೀಡಿ ರಾಮ ಮಂದಿರವು ಶತಮಾನದ ವಿಸ್ಮಯವಾಗಿ ಅದ್ಭುತ ಮಂದಿರವಾಗಿ ಮೂಡಿ ಬರಬೇಕು. ಎಲ್ಲರ ಬೆಂಬಲದೊಂದಿಗೆ ಜನತಾ ರಾಮ ಮಂದಿರ ನಿರ್ಮಾಣವಾಗಲಿ ಎಂದು ಹೆಗ್ಗಡೆಯವರು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಗಣ್ಯರು ರಾಮ ಮಂದಿರ ನಿಧಿ ಸಮಾರ್ಪಣೆಗೆ ತಮ್ಮ ದೇಣಿಗೆಯನ್ನು ಪ್ರಕಟಿಸಿದರು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿವೇಕ್ ಆಳ್ವ, ವಿಶ್ವ ಹಿಂದೂ ಪರಿಷದ್ನ ವಿನಯಚಂದ್ರ, ಬಸವರಾಜï, ಗಣೇಶ್ ಬೆಳ್ತಂಗಡಿ ಮೊದಲಾದವರು ಉಪಸ್ಥಿತರಿದ್ದರು.

Facebook Comments