ಲೋಕಸಭಾ ಹಂಗಾಮಿ ಸ್ಪೀಕರ್ ಆಗಿ ವೀರೇಂದ್ರ ಕುಮಾರ್ ಪ್ರಮಾಣವಚನ ಸ್ವೀಕಾರ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜೂ.17- ಹದಿನೇಳನೆ ಲೋಕಸಭೆಯ ಹಂಗಾಮಿ ಸ್ಪೀಕರ್ ಆಗಿ ವೀರೇಂದ್ರ ಕುಮಾರ್ ಇಂದು ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ರಮಾನಾಥ್ ಕೋವಿಂದ್ ಹಂಗಾಮಿ ಸ್ಪೀಕರ್ ಅವರಿಗೆ ಪ್ರಮಾಣ ವಚನ ಬೋಧಿಸಿದರು.

ಇಂದಿನಿಂದ ಆರಂಭವಾಗಿರುವ ಸಂಸತ್ ಅಧಿವೇಶನದಲ್ಲಿ ವೀರೇಂದ್ರ ಕುಮಾರ್ ಇಂದು ಮತ್ತು ನಾಳೆ 543 ನೂತನ ಲೋಕಸಭಾ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ.

ಬುಧವಾರ ಜೂ.19ರಂದು ಪೂರ್ಣ ಪ್ರಮಾಣದ ಲೋಕಸಭಾ ಅಧ್ಯಕ್ಷರ ಆಯ್ಕೆ ನಡೆಯುವವರೆಗೂ ವೀರೇಂದ್ರ ಕುಮಾರ್ ಲೋಕಸಭಾ ಕಲಾಪಗಳನ್ನು ಹಂಗಾಮಿ ಸ್ಪೀಕರ್ ಆಗಿ ನಿರ್ವಹಿಸಲಿದ್ದಾರೆ.

ಮಧ್ಯಪ್ರದೇಶದ ಟಿಕಂಗಢ ಲೋಕಸಭಾ ಕ್ಷೇತ್ರದಿಂದ ಈವರೆಗೆ 7 ಬಾರಿ ಆಯ್ಕೆಯಾಗಿರುವ ವೀರೇಂದ್ರ ಕುಮಾರ್ ಈ ಹಿಂದೆ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.

Facebook Comments