ಟೋಲ್‍ಗೇಟ್ ಬಳಿ ವಿಷ್ಣು ಭಾವಚಿತ್ರ ಅಳವಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.28- ಸಾಹಸಸಿಂಹ ವಿಷ್ಣುವರ್ಧನ್ ಅವರ ಕಂಚಿನ ಪ್ರತಿಮೆಯ ನಿರ್ಮಾಣ ನಂತರ ಹಿಂದೆ ಇದ್ದ ಸ್ಥಳದಲ್ಲಿಯೇ ಪ್ರತಿಷ್ಠಾಪನೆ ಮಾಡಲಾಗುವುದು ಎಂದು ತೀರ್ಮಾನ ಕೈಗೊಳ್ಳಲಾಗಿದೆ. ಇಂದು ಮಾಗಡಿ ರಸ್ತೆ ಟೋಲ್‍ಗೇಟ್ ಸಿಗ್ನಲ್ ಬಳಿ ವಿಷ್ಣು ಭಾವಚಿತ್ರವನ್ನು ತಾತ್ಕಾಲಿಕವಾಗಿ ಇಟ್ಟು ಅವರ ಅಭಿಮಾನಿಗಳು ಪೂಜೆ ಸಲ್ಲಿಸಿದರು.

ಈ ವೇಳೆ ಆದಿಚುಂಚನಗಿರಿ ಮಠದ ಶ್ರೀ ಸೌಮ್ಯನಾಥ ಸ್ವಾಮೀಜಿ ಅವರು ಇದಕ್ಕೆ ಸಾಕ್ಷಿಯಾದರು. ಸಚಿವ ವಿ.ಸೋಮಣ್ಣ ಅವರು ಸ್ಥಳಕ್ಕೆ ಭೇಟಿ ನೀಡಿ ಕಂಚಿನ ಪ್ರತಿಮೆ ನಿರ್ಮಿಸುವ ಆಶ್ವಾಸನೆ ನೀಡಿದರು. ಸಮಸ್ಯೆಯನ್ನು ಕೆದಕದೆ ಎಲ್ಲರೂ ಸಮಾಧಾನ ದಿಂದ ಇರಬೇಕು.

ಕಲಾವಿದರಿಗೆ ಗೌರವ ಕೊಡೋಣ. ಆದರೆ ಶಾಂತಿ ಸುವ್ಯವಸ್ಥೆ ಕಾಪಾಡು ವುದು ಮುಖ್ಯ. ಹಿಂದೆ ಇದ್ದ ಪ್ರತಿಮೆಯನ್ನು ಭಗ್ನಗೊಳಿಸಿದ ಕಿಡಿಗೇಡಿಗಳ ಬಗ್ಗೆ ಪೊಲೀಸರು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದು ವಿ.ಸೋಮಣ್ಣ ತಿಳಿಸಿದರು.

ಇಂದೂ ಕೂಡ ವಿಷ್ಣು ಅಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ಸೇರಿ ನೆಚ್ಚಿನ ನಟನಿಗೆ ಅನ್ಯಾಯವಾಗಬಾರದು. ಅದಕ್ಕೆ ನಾವು ಅವಕಾಶ ನೀಡುವುದಿಲ್ಲ. ಸದ್ಯಕ್ಕೆ ನಾವು ರಸ್ತೆ ಬದಿಯಲ್ಲಿ ವಿಷ್ಣುವರ್ಧನ್ ಅವರ ಭಾವಚಿತ್ರವನ್ನು ಅಳವಡಿಸಿದ್ದೇವೆ. ಪ್ರತಿಮೆ ಪುನರ್ ಸ್ಥಾಪನೆ ವೇಳೆ ದೊಡ್ಡ ಕಾರ್ಯಕ್ರಮವನ್ನು ಕೂಡ ಆಯೋಜಿಸುತ್ತೇವೆ ಎಂದು ಹೇಳಿದರು.

Facebook Comments