ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ಶೋಷಣೆ ವಿರುದ್ಧ ಪಂಜಿನ ಮೆರವಣಿಗೆ

ಈ ಸುದ್ದಿಯನ್ನು ಶೇರ್ ಮಾಡಿ

ಮಂಡ್ಯ : ಆರೆಸ್ಸೆಸ್, ವಿಶ್ವ ಹಿಂದೂ ಪರಿಷತ್, ಯುವ ಬ್ರಿಗೇಡ್, ಬಜರಂಗದಳ, ಹಾಗೂ ಭಾರತೀಯ ಜನತಾ ಪಾರ್ಟಿ ವತಿಯಿಂದ ಬಾಂಗ್ಲಾದಲ್ಲಿ ನಡೆಯುತ್ತಿರುವ ಹಿಂದುಗಳ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ ಹಿಂದೂ ಬಾಂಧವರ ಶೋಷಣೆ ವಿರುದ್ಧ ಪಂಜಿನ ಮೆರವಣಿಗೆ ಹಾಗೂ ಪ್ರತಿಭಟನೆ ನಡೆಸಲಾಯಿತು. ಹಾಗೂ ಮತಾಂತರ ಕಾಯ್ದೆಯನ್ನು ಶೀಘ್ರವಾಗಿ ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಲಾಯಿತು.

ಮಳವಳ್ಳಿ ಮಂಡಲದ ಅಧ್ಯಕ್ಷರಾದ ಶ್ರೀ ಎಂ ಎನ್ ಕೃಷ್ಣ, ಉಪಾಧ್ಯಕ್ಷರಾದ ನಾಗೇಶ್ ಕರೀಗೌಡ ಗೊಲ್ಲರಹಳ್ಳಿ , ದೊಡ್ಡಮನೆ ಅಭಿಜಿತ್ ಬಸವರಾಜ್,ಚೇತನ್, ವೇಣು , ಯುವ ಮೋರ್ಚಾ ಅಧ್ಯಕ್ಷ ಮೋಹನ್ . ದೇವರಾಜ್ ಅಣ್ಣ, ಕಿರುಗಾವಲು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಅನಿಲ್ ಜೀವಾ , ಹಾಗೂ ಬೋರೇಗೌಡ್ರು , ಹಿರಿಯ ಮುಖಂಡರಾದ ರಾಜಣ್ಣ ವಿಶ್ವ ಹಿಂದೂ ಪರಿಷತ್ ಸಂಚಾಲಕರಾದ ಹಾಗೂ ವಕೀಲರಾದ ಶ್ರೀಕಂಠಸ್ವಾಮಿ
ಯುವ ಬ್ರಿಗೇಡ್ ನ ಜಿಲ್ಲಾ ಸಂಚಾಲಕರಾದ ಮಹೇಶ ಎಸ್.ಪಿ.ಕಿಟ್ಟಿ ಮಳವಳ್ಳಿ ಸುಣ್ಣದದೂಡ್ಡಿ ಮತ್ತೆ ಪದಾಧಿಕಾರಿಗಳು ಮುಖಂಡರು ನೇತೃತ್ವದಲ್ಲಿ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಸಲಾಯಿತು.

Facebook Comments

Sri Raghav

Admin