“ವಿಶ್ವನಾಥ್‍ ಅವರಿಗೂ ಸೂಕ್ತ ಸ್ಥಾನ ಮಾನ ಸಿಗಲಿದೆ”

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.1- ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರಿಗೂ ಸರ್ಕಾರದಲ್ಲಿ ಸೂಕ್ತ ಸ್ಥಾನಮಾನ ಸಿಗಲಿದೆ. ಸ್ವಲ್ಪದಿನ ಸಹನೆಯಿಂದ ಇರಬೇಕೆಂದು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಮನವಿ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್, ಜೆಡಿಎಸ್‍ನಿಂದ ಬಂದಿದ್ದ ಎಲ್ಲರಿಗೂ ಬಿಜೆಪಿ ಪಕ್ಷದಲ್ಲಿ ಮುಖ್ಯಮಂತ್ರಿಯವರು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ.

ವಿಶ್ವನಾಥ್, ಎಂ.ಟಿ.ಬಿ.ನಾಗರಾಜ್ ಹಾಗೂ ಆರ್.ಶಂಕರ್ ಅವರಿಗೂ ಸೂಕ್ತ ಸ್ಥಾನಮಾನ ಸಿಗಲಿದೆ. ಸೂಕ್ತ ಸಂದರ್ಭದಲ್ಲಿ ಪಕ್ಷ ಅವರಿಗೂ ಏನುಕೊಡಬೇಕೋ ಅದನ್ನು ಕೊಡುತ್ತದೆ ಎಂದರು. ಎಚ್.ವಿಶ್ವನಾಥ್ ಯಾವುದೇ ಪಕ್ಷದಲ್ಲಿದ್ದರೂ ನೇರವಾಗಿ ಮಾತನಾಡುವಂತಹವರು. ಇದರಿಂದಲೇ ಕೆಲವು ಸಂದರ್ಭದಲ್ಲಿ ಸಮಸ್ಯೆಗಳನ್ನು ಸೃಷ್ಟಿಸಿಕೊಂಡಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿಯಲ್ಲಿದ್ದಾಗಲೂ ಟೀಕೆ ಮಾಡುತ್ತಾರೆ. ಒಂದೊಂದು ಬಾರಿ ನಾನು ಏನು ಮಾತನಾಡುತ್ತೇನೆ ಎಂಬುದರ ಅರಿವೇ ಇರುವುದಿಲ್ಲ. ಹೀಗಾಗಿ ವಿವಾದಗಳನ್ನು ಹುಟ್ಟುಸಿಕೊಳ್ಳುತ್ತಾರೆ ಎಂದು ವಿಷಾದಿಸಿದರು. ಅವರಿಗೆ ಉಪ ಚುನಾವಣೆಯಲ್ಲಿ ಸ್ಪರ್ಧಿಸುವುದು ಬೇಡ ಎಂದು ಮುಖ್ಯಮಂತ್ರಿ ಸೇರಿದಂತೆ ಪಕ್ಷದ ಅನೇಕರು ಸಲಹೆ ಮಾಡಿದ್ದರು.

ಆದರೆ, ನಮ್ಮ ಮಾತನ್ನು ಕೇಳದೆ ಚುನಾವಣೆಯಲ್ಲಿ ಸ್ಪರ್ಧಿಸಿದ ಪರಿಣಾಮ ಪರಾಭವಗೊಂಡರು. ಹುಣಸೂರಿನಲ್ಲಿ ಸ್ಪರ್ಧಿಸುವುದು ಬೇಡಾ ಎಂದು ಪರಿಪರಿಯಾಗಿ ಸಿಎಂ ಕೇಳಿಕೊಂಡರೂ ಅವರ ಮಾತನ್ನು ನಿರ್ಲಕ್ಷಿಸಿದ್ದರ ಪರಿಣಾಮ ಸೋಲು ಕಂಡರು. ಕೆಲವು ಬಾರಿ ಏನು ಮಾತನಾಡುತ್ತೇನೆ ಎಂಬುದರ ಬಗ್ಗೆ ಅವರಿಗೆ ಅರಿವೇ ಇರುವುದಿಲ್ಲ. ಹೀಗಾಗಿ ವಿವಾದ ಹುಟ್ಟುತ್ತದೆ. ವಿಶ್ವನಾಥ್ ಅವರ ಹೆಸರನ್ನು ದೆಹಲಿಗೆ ಯಾರು ಕಳುಹಿಸಿದ್ದಾರೆ ಎಂಬುದು ನನಗೆ ಗೊತ್ತಿಲ್ಲ.

ನನ್ನನ್ನು ಮಂತ್ರಿ ಸ್ಥಾನಕ್ಕೆ ಪರಿಗಣಸಿಲ್ಲ ಎಂದು ಅವರಿಗೆ ಯಾವ ಮೂಲದಿಂದ ಸುದ್ದಿ ಬಂದಿದೆಯೋ ಗೊತ್ತಿಲ್ಲ. ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು, ವರಿಷ್ಠರ ತೀರ್ಮಾನÀಕ್ಕೆ ಎಲ್ಲರೂ ಬದ್ಧರಾಗಿರಬೇಕೆಂದು ಅವರು ತಿಳಿಸಿದರು.

Facebook Comments