ಖಾತೆ ಹಂಚಿಕೆ ವಿಳಂಬಕ್ಕೆ ಎಚ್.ವಿಶ್ವನಾಥ್ ಅಸಮಾಧಾನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ. 18- ಪಕ್ಷೇತರ ಶಾಸಕರು ಸಚಿವ ಸಂಪುಟಕ್ಕೆ ಸೇರ್ಪಡೆ ಯಾಗಿ ಇಷ್ಟು ದಿನಗಳಾದರು ಖಾತೆ ಹಂಚಿಕೆ ಮಾಡಿಲ್ಲ, ಇಂತಹ ವಿಳಂಬ ಧೋರಣೆ ಅನುಸರಿಸಬಾರದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಶಾಸಕ ಎಚ್.ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರನ್ನು ಸಂಪುಟಕ್ಕೆ ಸೇರ್ಪಡೆಗೊಳಿಸಿದ್ದರೂ, ಇದುವರೆಗೂ ಖಾತೆ ಕೊಟ್ಟಿಲ್ಲ, ಯಾಕೆ ಎಂದು ಗೊತ್ತಿಲ್ಲ, ಈ ರೀತಿ ಮಾಡುವುದು ಅಪಮಾನಕರ ಎಂದರು.

ಪ್ರಾಥಮಿಕ ಶಿಕ್ಷಣ ಇಲಾಖೆಯ ಸಚಿವ ಸ್ಥಾನಕ್ಕೆ ಬಿಎಸ್‍ಪಿ ಶಾಸಕ ಸುರೇಶ್ ಅವರು ರಾಜೀನಾಮೆ ಕೊಟ್ಟ ನಂತರ ಆ ಇಲಾಖೆಗೆ ಮುಖ್ಯಸ್ಥರೆ ಇಲ್ಲದಂತಾಗಿದೆ. ಶಿಕ್ಷಣ ಇಲಾಖೆಗೆ ಸಚಿವರ ಅಗತ್ಯವಿದೆ. ಅಬಕಾರಿ, ಶಿಕ್ಷಣ ಸೇರಿದಂತೆ ಹಲವು ಖಾತೆಗಳು ಮುಖ್ಯಮಂತ್ರಿಗಳ ಬಳಿಯಿವೆ. ಆ ಖಾತೆಗಳನ್ನು ಬೇರೆಯವರಿಗೆ ನೀಡಬಹುದು ಎಂದು ಹೇಳಿದರು .ಸಚಿವ ಸಂಪುಟ ವಿಸ್ತರಣೆಯಲ್ಲಿ ಅಲ್ಪಸಂಖ್ಯಾತರಿಗೂ ಅವಕಾಶ ನೀಡಬೇಕಿತ್ತು.

ವಿಧಾನಪರಿಷತ್ ಸದಸ್ಯರಾದ ಬಿ.ಎಮ್.ಫಾರೂಖ್ ಅವರಿಗೆ ಸಂಪುಟದಲ್ಲಿ ಅವಕಾಶ ಕೊಡಬೇಕಿತ್ತು ಎಂದ ಅವರು ಒಂದು ವೇಳೆ ಅವರಿಗೆ ಅವಕಾಶ ನೀಡಿದ್ದರೆ ದಲಿತ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗದವರಿಗೆ ಸಚಿವ ಸ್ಥಾನ ಕಲ್ಪಿಸಿದಂತಾಗುತಿತ್ತು. ಜೆಡಿಎಸ್ ಜಾತ್ಯಾತೀತ ಪಕ್ಷವಾಗಿರುವುದರಿಂದ ಎಲ್ಲ ವರ್ಗಗಳಿಗೂ ಅವಕಾಶ ನೀಡಿದಂತಾಗುತಿತ್ತು ಎಂದು ಹೇಳಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ