ಕಾಮನ್‍ವೆಲ್ತ್ ಪಾರ್ಲಿಮೆಂಟರಿ ಸಮ್ಮೇಳನದಲ್ಲಿ ಸ್ಪೀಕರ್ ಕಾಗೇರಿ ಭಾಗಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.9-ಕಾಮನ್‍ವೆಲ್ತ್ ಪಾರ್ಲಿಮೆಂಟರಿ ಅಸೋಸಿ ಯೇಷನ್ ಉಗಾಂಡದಲ್ಲಿ ಸೆ. 22ರಿಂದ 29ರವರೆಗೆ ಆಯೋಜಿಸಿ ರುವ ಸಮ್ಮೇಳನದಲ್ಲಿ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪಾಲ್ಗೊಳ್ಳಲಿದ್ದಾರೆ. ಉಗಾಂಡದ ಕಂಬಾಲದಲ್ಲಿ ನಡೆಯುವ ಸಮಾವೇಶದಲ್ಲಿ ಲೋಕ ಸಭಾಧ್ಯಕ್ಷರು ಸೇರಿದಂತೆ ವಿವಿಧ ರಾಜ್ಯಗಳವಿಧಾನಸಭಾ ಅಧ್ಯಕ್ಷರು ಪಾಲ್ಗೊಳ್ಳಲಿದ್ದಾರೆ.

ಸಂಸದೀಯ ಕಾರ್ಯಗಳ ವ್ಯವಸ್ಥೆಯಲ್ಲಿ ವಿಜ್ಞಾನ, ತಂತ್ರಜ್ಞಾನ ಬಳಕೆಯ ಪರಿಣಾಮದ ಬಗ್ಗೆಯೂ ಚರ್ಚೆ ನಡೆಯಲಿದೆ. ಸಮಾವೇಶದಲ್ಲಿ ಕಾಮನ್‍ವೆಲ್ತ್‍ಗೆ ಸವಾಲಾಗಿರುವ ಕ್ಷಿಪ್ರ ನಗರೀಕರಣ ಮತ್ತು ಗ್ರಾಮೀಣ ಭಾಗದ ಕ್ಷೀಣತೆ ಬಗ್ಗೆಯೂ ಸಮಾಲೋಚನೆ ನಡೆಸಲಾಗುತ್ತದೆ.

Facebook Comments