ಪಾಶ್ಚಿಮಾತ್ಯ ದುಷ್ಟ ಶಕ್ತಿಗಳ ಕುತಂತ್ರ, ಅಲರ್ಟ್ ಆದ ರಷ್ಯಾ

ಈ ಸುದ್ದಿಯನ್ನು ಶೇರ್ ಮಾಡಿ

ಮಾಸ್ಕೋ, ಫೆ.25- ದೇಶದ ಅರ್ಥ ವ್ಯವಸ್ಥೆ ಮತ್ತು ಶಾಂತಿಯನ್ನು ಹಾಳುಗೆಡವಲು ಕೆಲವು ಪಾಶ್ಚಿಮಾತ್ಯ ದುಷ್ಟ ಶಕ್ತಿಗಳು ಯತ್ನಿಸುತ್ತಿದ್ದು, ಅದನ್ನು ಮಟ್ಟ ಹಾಕಲು ಗುಪ್ತಚರ ಸಂಸ್ಥೆಗಳು ತಮ್ಮ ಕೆಲಸವನ್ನು ದುಪ್ಪಟ್ಟಾಗಿ ಮಾಡಿ ಕಟ್ಟೆಚ್ಚರ ವಹಿಸಬೇಕು ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೂಚನೆ ನೀಡಿದ್ದಾರೆ.

ದೇಶದ ಅತ್ಯುನ್ನತ ರಕ್ಷಣಾ ಸಂಸ್ಥೆ ಫೆಡರಲ್ ಸೆಕ್ಯೂರಿಟಿ ಸರ್ವೀಸ್ (ಎಫ್‍ಎಸ್‍ಡಿ) ಅತ್ಯುನ್ನತ ಅಧಿಕಾರಿಗಳ ಸಭೆ ನಡೆಸಿದ ಪುಟಿನ್ ನಮ್ಮ ದೇಶದ ಅಭಿವೃದ್ಧಿ ಕಾರ್ಯಗಳನ್ನು ತಡೆಯಲು ಮತ್ತು ಗಡಿಗಳುದ್ದಕ್ಕೂ ಸಮಸ್ಯೆಗಳನ್ನು ತಂದಿಕ್ಕಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮನ್ನು ಪ್ರಚೋದಿಸಿ ಸಾರ್ವಭೌಮತ್ವ ಹಾಗೂ ಘನತೆ ಕುಗ್ಗಿಸುವಂತಹ ಕೆಲಸ ಮಾಡಲು ದುಷ್ಟರು ಯತ್ನಿಸುತ್ತಿದ್ದಾರೆ. ಇದನ್ನು ತಡೆಯಲು ನಾವು ಶಕ್ತಿಮೀರಿ ಪ್ರಯತ್ನಿಸಬೇಕಾಗಿದೆ ಎಂದು ಹೇಳಿದ್ದಾರೆ.

ಕೆಲ ವಿದೇಶಿ ಶಕ್ತಿಗಳು ರಷ್ಯಾವನ್ನು ಶಕ್ತಿಹೀನಗೊಳಿಸಲು ಪ್ರಯತ್ನಿಸುತ್ತಿವೆ ಎಂದು ಹೇಳಿರುವ ಅವರು ಪರೋಕ್ಷವಾಗಿ ಅಮೆರಿಕದ ಹೆಸರು ಪ್ರಸ್ತಾಪಿಸದೆ ಬೊಟ್ಟು ಮಾಡಿದ್ದಾರೆ.

ಉಕ್ರೇನ್‍ನಲ್ಲಿ ನಡೆದ ಘಟನೆಗಳು ಇತ್ತೀಚೆಗೆ ಅಮೆರಿಕ ಅಧ್ಯಕ್ಷೀಯ ಚುನಾವಣೆ ಹಾಗೂ ರಷ್ಯಾದ ವಿಪಕ್ಷ ನಾಯಕ ಅಲೆಕ್ಸೆಲ್ ನೆವಾಲಿ ನೇತೃತ್ವದಲ್ಲಿ ನಡೆದಿರುವ ಪ್ರತಿಭಟನೆಗಳನ್ನು ಗಮನದಲ್ಲಿರಿಸಿಕೊಂಡು ಅಧ್ಯಕ್ಷ ಪುಟಿನ್ ಅವರು ಗಂಭೀರವಾದ ಸಭೆ ನಡೆಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಅಮೆರಿಕ ಚುನಾವಣೆ ಸಂದರ್ಭದಲ್ಲಿ ಪ್ರಸ್ತುತ ಅಮೆರಿಕ ಅಧ್ಯಕ್ಷರಾಗಿರುವ ಜೋ ಬಿಡೆನ್ ಅವರು ರಷ್ಯಾ ವಿರುದ್ಧ ಟೀಕಾಪ್ರಹಾರ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Facebook Comments

Sri Raghav

Admin