ಒಕ್ಕಲಿಗರ ಸಂಘದ ಚುನಾವಣೆ : 25 ನಾಮಪತ್ರಗಳು ತಿರಸ್ಕೃತ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.25- ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿ ಚುನಾವಣೆಗೆ ಸಲ್ಲಿಕೆಯಾಗಿದ್ದ 312 ನಾಮಪತ್ರಗಳಲ್ಲಿ 25 ನಾಮಪತ್ರಗಳು ತಿರಸ್ಕøತವಾಗಿದ್ದು, 272 ನಾಮಪತ್ರಗಳು ಕ್ರಮಬದ್ಧವಾಗಿವೆ. ಬೆಂಗಳೂರು ಕ್ಷೇತ್ರದಿಂದ 4, ಮೈಸೂರು-ಚಿಕ್ಕಮಗಳೂರು ಕ್ಷೇತ್ರದಿಂದ ತಲಾ 1 ನಾಮಪತ್ರ ತಿರಸ್ಕøತಗೊಂಡಿದ್ದರೆ, ಚಿತ್ರದುರ್ಗ ಕ್ಷೇತ್ರದಲ್ಲಿ ಅತಿ ಹೆಚ್ಚು 19 ನಾಮಪತ್ರಗಳು ತಾಂತ್ರಿಕ ಕಾರಣಗಳಿಂದಾಗಿ ತಿರಸ್ಕøತಗೊಂಡಿವೆ.

ಸಂಘದ 35 ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆಗೆ ಚುನಾವಣೆ ನಡೆಯುತ್ತಿದ್ದು, ಇಂದು ನಾಮಪತ್ರ ವಾಪಸ್‍ಗೆ ಕಡೆಯ ದಿನವಾಗಿದ್ದು, ಸಂಜೆ ವೇಳೆಗೆ ಚುನಾವಣಾ ಕಣದಲ್ಲಿ ಉಳಿಯುವ ಅಭ್ಯರ್ಥಿಗಳ ಪಟ್ಟಿಯನ್ನು ಆಯಾ ಕ್ಷೇತ್ರದ ಚುನಾವಣಾಕಾರಿಗಳು ಪ್ರಕಟಿಸಲಿದ್ದಾರೆ.

ಬೆಂಗಳೂರು 152, ಮೈಸೂರು 13, ಮಂಡ್ಯ 26, ಹಾಸನ 16, ತುಮಕೂರು 8, ಚಿತ್ರ ದುರ್ಗ 6, ಕೋಲಾರ-ಚಿಕ್ಕಬಳ್ಳಾಪುರ 20, ದಕ್ಷಿಣ ಕನ್ನಡ-ಉಡುಪಿ 4, ಕೊಡಗು 10, ಶಿವಮೊಗ್ಗ- ಉತ್ತರ ಕನ್ನಡ 11, ಚಿಕ್ಕಮಗಳೂರು ಕ್ಷೇತ್ರದಲ್ಲಿ 6 ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಸಂಘದ ಚುನಾವಣಾಕಾರಿ ಪ್ರಕಟಿಸಿ ದ್ದಾರೆ. ನಾಳೆ ಕಣದಲ್ಲಿ ಉಳಿಯುವ ಅಭ್ಯರ್ಥಿಗಳಿಗೆ ಆಯಾ ಕ್ಷೇತ್ರದ ಚುನಾವಣಾ ಅಕಾರಿಗಳ ಕಚೇರಿಯಲ್ಲಿ ಚಿಹ್ನೆಯನ್ನು ಹಂಚಿಕೆ ಮಾಡಲಾಗುತ್ತದೆ. ಡಿ.12ರಂದು ಬೆಳಗ್ಗೆ 7 ರಿಂದ ಸಂಜೆ 5 ಗಂಟೆ ವರೆಗೆ ಮತದಾನ ನಡೆಯಲಿದೆ. ಡಿ.15ರ ಬೆಳಗ್ಗೆ 9 ಗಂಟೆಯಿಂದ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಲಿದೆ.

ನಾಮಪತ್ರ ಸಲ್ಲಿಕೆ, ವಾಪಸಾತಿ ಅವ ಮುಗಿದಿರು ವುದರಿಂದ ಸಂಘದ ಚುನಾವಣಾ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಎಸ್‍ಎಂಎಸ್ ಸಂದೇಶ, ಜಾಹೀರಾತು, ಸಭೆ-ಸಮಾರಂಭಗಳಲ್ಲದೆ ಸಾಮಾಜಿಕ ಜಾಲತಾಣಗಳ ಮೂಲಕ ಮತ ದಾರರನ್ನು ಸಂಪರ್ಕಿಸುವ ಪ್ರಯತ್ನವನ್ನು ಅಭ್ಯರ್ಥಿಗಳು ಮಾಡುತ್ತಿದ್ದಾರೆ.

ತಂಡೋಪತಂಡವಾಗಿ ಮತದಾರರನ್ನು ಸಂಪರ್ಕಿಸಿ ಮತ ಯಾಚಿಸುತ್ತಿರು ವುದು ಒಂದೆಡೆ ಯಾದರೆ ಮತ್ತೊಂದೆಡೆ ಕೆಲವೊಂದು ತಂಡಗಳು ಸಭೆ- ಸಮಾರಂಭ ಮಾಡಿ ಔತಣ ಕೂಟ ಏರ್ಪಡಿಸಿ ಮತಯಾಚನೆ ಕಾರ್ಯದಲ್ಲಿ ತೊಡಗಿವೆ. ಕಳೆದ ಬಾರಿಯಂತೆ ಈ ಬಾರಿಯೂ ಒಕ್ಕಲಿಗರ ಸಂಘದ ಚುನಾವಣೆ ಕಾವು ತಾರಕಕ್ಕೇರುವುದರಲ್ಲಿ ಅನುಮಾನವಿಲ್ಲ.

ಬೆಂಗಳೂರು ಸೇರಿದಂತೆ ಎಲ್ಲ ಜಿಲ್ಲೆಗಳಲ್ಲೂ ಸಂಘದ ಚುನಾವಣೆಗೆ ಭರ್ಜರಿ ಪ್ರಚಾರ ನಡೆಯುತ್ತಿದೆ. ಮತದಾರರನ್ನು ಓಲೈಸುವ ನಾನಾ ತಂತ್ರಗಳು ಭರದಿಂದ ಸಾಗಿವೆ. ನಾಳೆ ಸಂಜೆ ವೇಳೆಗೆ ಅಂತಿಮವಾಗಿ ಎಷ್ಟು ಮಂದಿ ಕಣದಲ್ಲಿ ಉಳಿಯಲಿದ್ದಾರೆ ಎಂಬುದು ಸ್ಪಷ್ಟವಾಗಲಿದೆ. ಬೆಂಗಳೂರಿನಲ್ಲಿ ಅತಿ ಹೆಚ್ಚು ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದು, ಭಾರೀ ಪೈಪೋಟಿ ಏರ್ಪಟ್ಟಿದೆ. ಆರೋಪ-ಪ್ರತ್ಯಾರೋಪಗಳು ಕೂಡ ಕೇಳಿಬರುತ್ತಿದ್ದು, ಮತದಾರರನ್ನು ನಾನಾ ರೀತಿಯಲ್ಲಿ ಆಕರ್ಷಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ.

Facebook Comments