ಒಕ್ಕಲಿಗರ ಸಂಘದ ಚುನಾವಣೆಗೆ ಬಿರುಸಿನ ಪ್ರಚಾರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.28-ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆಗೆ ಸಂಬಂಸಿದ ಚುನಾವಣೆ ಕಾವು ಏರ ತೊಡಗಿದ್ದು, ಎಲ್ಲೆಡೆ ಬಿರುಸಿನ ಪ್ರಚಾರದಲ್ಲಿ ಅಭ್ಯರ್ಥಿಗಳು ನಿರತರಾಗಿದ್ದಾರೆ.ಧ್ವನಿಮುದ್ರಿತ ಸಂದೇಶ, ಎಸ್‍ಎಂಎಸ್ ಸಂದೇಶ ಸೇರಿದಂತೆ ಸಾಮಾಜಿಕ ಜಾಲತಾಣ ಗಳ ಮೂಲಕವು ಅಭ್ಯರ್ಥಿಗಳು ಮತ ಯಾಚಿಸುತ್ತಿದ್ದಾರೆ. ಅಲ್ಲದೆ ಕರಪತ್ರ ಹಂಚುವಿಕೆ, ದೂರವಾಣಿ ಕರೆ ಮೊದಲಾದ ವಿಧಾನಗಳ ಮೂಲಕ ಮತದಾರರ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಅಲ್ಲದೆ ಮದುವೆ, ಬೀಗರ ಔತಣಕೂಟ, ಕಾರ್ಯಕ್ರಮ, ಸಭೆಸಮಾರಂಭ ಸೇರಿದಂತೆ ಒಕ್ಕಲಿಗ ಸಮುದಾಯದ ಹೆಚ್ಚು ಜನರು ಸೇರುವ ಕಡೆಗಳಲ್ಲಿ ಅಭ್ಯರ್ಥಿಗಳು ಹಾಗೂ ಅಭ್ಯರ್ಥಿ ಪರವಾಗಿ ಮತ ಕೋರಲಾಗುತ್ತಿದೆ. ಡಿ.12ರಂದು ಸಂಘದ 35 ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆಗೆ ಮತದಾನ ನಡೆಯಲಿದೆ. ಈಗಾಗಲೇ ರಾಜ್ಯದಲ್ಲಿ 221 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಅದರಲ್ಲೂ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ರಾಮನಗರ ಜಿಲ್ಲೆ ಒಳಗೊಂಡ 15 ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆಗೆ ಅತಿಹೆಚ್ಚಿನ ಸ್ಪರ್ಧೆ ಉಂಟಾಗಿದೆ.

ಈ ಕ್ಷೇತ್ರದಲ್ಲಿ 141 ಮಂದಿ ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದಾರೆ. ಕಳೆದ ಬಾರಿಯಂತೆ ಈ ಬಾರಿಯು ಬೆಂಗಳೂರಿನಲ್ಲಿ ಭಾರೀ ಪೈಪೊಟಿ ಏರ್ಪಟ್ಟಿದ್ದು, ಸಂಘದ ಚುನಾವಣೆ ಬಗ್ಗೆಯೇ ಹೆಚ್ಚು ಚರ್ಚೆಯಾಗುತ್ತಿದೆ.ಹಿಂದಿನ ಪದಾಕಾರಿಗಳು ಹಾಗೂ ನಿರ್ದೇಶಕರ ಬಗ್ಗೆ ಆರೋಪಗಳು ಕೇಳಿ ಬರುತ್ತಿವೆ. ಹೊಸಬರ ಆಯ್ಕೆಗೆ ಹೆಚ್ಚಿನ ಒತ್ತಾಯವೂ ವ್ಯಕ್ತವಾಗುತ್ತಿದೆ. ಹಳೆಬರ ನಡುವೆಯೇ ಪರಸ್ಪರ ಆರೋಪ, ಪ್ರತ್ಯಾರೋಪ ನಡೆಯುತ್ತಿದ್ದು, ಸ್ಪರ್ಧೆಯಲ್ಲಿ ರುವ ಹಲವು ಮಂದಿ ನಾನಾ ರೀತಿಯ ಭರವಸೆಗಳೊಂದಿಗೆ ಮತದಾರರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.

ಕಳೆದ ಬಾರಿಯಂತೆಯೇ ಈ ಬಾರಿಯು ತೀವ್ರ ಸ್ಪರ್ಧೆ ಏರ್ಪಟ್ಟಿದ್ದು, 15 ಸ್ಥಾನಗಳಿಗಾಗಿ ಆರು ತಂಡಗಳು ಸ್ಪರ್ಧೆಗಿಳಿದಿವೆ. ಅಲ್ಲದೆ ಸ್ವತಂತ್ರವಾಗಿಯೂ ಹಲವು ಮಂ ಕಣದಲ್ಲಿದ್ದಾರೆ.ಸಂಘದ ಮಾಜಿ ಅಧ್ಯಕ್ಷರಾದ ಡಾ.ಅಪ್ಪಾಜಿ ಗೌಡ, ಡಿ.ಕೆಂಚಪ್ಪಗೌಡ, ವಿಧಾನಪರಿಷತ್ ಸದಸ್ಯ ಅ.ದೇವೇಗೌಡ, ಮಾಜಿ ನಿರ್ದೇಶಕ ಜಯಮುತ್ತು, ಡಾ.ಆಂಜನಪ್ಪ, ಸಂಘದ ಹಿರಿಯ ನಿರ್ದೇಶಕ ಪ್ರೊ.ಕೆ.ಮಲ್ಲಯ್ಯ, ಪ್ರೊ.ನಾಗರಾಜ್ ಅವರ ನೇತೃತ್ವದ ತಂಡಗಳು ಸ್ರ್ಪಸಿದ್ದು, ನಿರಂತರವಾಗಿ ಮತದಾರರ ಓಲೈಸುವ ಪ್ರಯತ್ನದಲ್ಲಿ ತೊಡಗಿವೆ.

ಚುನಾವಣೆ ಹತ್ತಿರಕ್ಕೆ ಬರುತ್ತಿದ್ದಂತೆ ಪ್ರಚಾರದ ಕಾವು ತಾರಕಕ್ಕೇರಿದ್ದು, ಸಾಧ್ಯವಿರುವ ಎಲ್ಲ ತಂತ್ರಜ್ಞಾನ ಬಳಸಿಕೊಂಡು ಮತದಾರರನ್ನು ಸಂಪರ್ಕಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಅಲ್ಲದೆ ಸಭೆಸಮಾರಂಭಗಳ ಮೂಲಕ ಮತದಾರರಿಗೆ ಔತಣ ಏರ್ಪಡಿಸುವ ಮೂಲಕವೂ ಆಕರ್ಷಿಸುವ ಕಾರ್ಯದಲ್ಲಿ ಬಹಳಷು ಅಭ್ಯರ್ಥಿಗಳು ಮಗ್ನರಾಗಿದ್ದಾರೆ.

Facebook Comments

Sri Raghav

Admin