ದುರುಪಯೋಗ ಮಾಡಿಕೊಂಡ ಒಕ್ಕಲಿಗರ ಸಂಘದ ಹಣವನ್ನು ವಾರದೊಳಗೆ ಪಾವತಿಸದಿದ್ದರೆ ಕ್ರಿಮಿನಲ್ ಕೇಸ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.7- ದುರುಪಯೋಗ ಮಾಡಿಕೊಂಡಿರುವ ರಾಜ್ಯ ಒಕ್ಕಲಿಗರ ಸಂಘದ 20 ಲಕ್ಷ ರೂ.ಗಳನ್ನು ಒಂದು ವಾರದೊಳಗೆ ಪಾವತಿಸದಿದ್ದರೆ ಕ್ರಿಮಿನಲ್ ದಾವೆ ಹೂಡುವುದಾಗಿ ಎಚ್ಚರಿಕೆಯ ಲಾಯರ್ ನೋಟಿಸನ್ನು ಸಂಘದ ಮಾಜಿ ಅಧ್ಯಕ್ಷ ಹಾಗೂ ಖಜಾಂಚಿ ಅವರಿಗೆ ನೀಡಲಾಗಿದೆ.

ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷರಾದ ಡಿ.ಎನ್.ಬೆಟ್ಟೇಗೌಡ ಹಾಗೂ ಖಜಾಂಚಿ ಡಿ.ಸಿ.ಕೆ.ಕಾಳೇಗೌಡ ಅವರು ಒಂದು ವಾರದೊಳಗೆ 20 ಲಕ್ಷ ರೂ.ಗಳನ್ನು ಸಂಘಕ್ಕೆ ಪಾವತಿಸಬೇಕು. ಇಲ್ಲದಿದ್ದರೆ ಕ್ರಿಮಿನಲ್ ದಾವೆ ಹೂಡುವುದಾಗಿ ಸಂಘದ ಪರ ವಕಾಲತ್ತು ವಹಿಸಿರುವ ವಕೀಲರಾದ ಡಿ.ಎಸ್.ಸುದನ್ವ ಅವರು ನೋಟಿಸ್ ನೀಡಿದ್ದಾರೆ.

2014-15ರಲ್ಲಿ ಕೆಂಪೇಗೌಡ ವೈದ್ಯಕೀಯ ಕಾಲೇಜಿಗೆ ಡಾ.ಮನೋಜ್ ಎಂಬುವರು ಅನಸ್ಥೈಶೀಯಾ ಪಿಜಿ ಕೋರ್ಸ್‍ಗೆ ಸೇರಿರುತ್ತಾರೆ. ಆಗ 55 ಲಕ್ಷ ರೂ. ಪೈಕಿ 35 ಲಕ್ಷ ರೂ. ಪಾವತಿಸಿರುತ್ತಾರೆ. ಉಳಿಕೆ 20 ಲಕ್ಷವನ್ನು ನಂತರ ಪಾವತಿ ಮಾಡುವುದಾಗಿ ಹೇಳಿದಾಗ ಆಗಿನ ಖಜಾಂಚಿ ಕಾಳೇಗೌಡ ಅವರು ಅವಕಾಶ ಕೊಡಿಸುತ್ತಾರೆ. ಸಂಘದ ಅಧ್ಯಕ್ಷರಾದ ಬೆಟ್ಟೇಗೌಡ ಅವರು ಇದಕ್ಕೆ ಒಪ್ಪಿಗೆ ಸೂಚಿಸಿರುತ್ತಾರೆ.

ಮನೋಜ್ 2018ರಲ್ಲಿ ತಮ್ಮ ಅಧ್ಯಯನ ಮುಗಿಸಿದ್ದರು. 20 ಲಕ್ಷ ಹಣ ಪಾವತಿ ಮಾಡಿರುವುದಿಲ್ಲ. ಕಾಲೇಜಿನಲ್ಲಿ ಅಂಕಪಟ್ಟಿ ಕೊಡಲು ನಿರಾಕರಿಸಿದಾಗ ಮತ್ತೆ ಖಜಾಂಚಿ ಕಾಳೇಗೌಡ ಸಂಘಕ್ಕೆ ತಮ್ಮ ಅಕೃತ ಪತ್ರ ನೀಡಿ ತಾವೇ 20 ಲಕ್ಷ ರೂ. ಕಟ್ಟುವ ಭರವಸೆ ನೀಡಿರುತ್ತಾರೆ.

ಇದಕ್ಕೆ ಅಧ್ಯಕ್ಷರಾದ ಬೆಟ್ಟೇಗೌಡ ಒಪ್ಪಿ ಅನುಮೋದನೆ ನೀಡುತ್ತಾರೆ. ಆದರೆ, ಈವರೆಗೆ ಸಂಘಕ್ಕೆ ಹಣ ಪಾವತಿ ಮಾಡಿಲ್ಲದಿರುವುದು ಈಗ ಪತ್ತೆಯಾದ ಕಾರಣ ಸದರಿ ಇಬ್ಬರಿಗೂ ಲಾಯರ್ ನೋಟಿಸ್ ನೀಡಲಾಗಿದೆ.

Facebook Comments

Sri Raghav

Admin