ಸುಮಾತ್ರ ದ್ವೀಪದಲ್ಲಿ 16,400 ಅಡಿಗಳಷ್ಟು ಎತ್ತರಕ್ಕೆ ಸ್ಫೋಟಿಸಿದ ಜ್ವಾಲಾಮುಖಿ..!

ಈ ಸುದ್ದಿಯನ್ನು ಶೇರ್ ಮಾಡಿ

ಮೆಡನ್(ಇಂಡೋನೆಷ್ಯಾ), ಆ.10- ಇಂಡೋನೆಷ್ಯಾದ ಸುಮಾತ್ರ ದ್ವೀಪದಲ್ಲಿರುವ ಮೌಂಟ್ ಸಿನಬಂಗ್ ಜ್ವಾಲಾಮುಖಿ ಸೋಟಗೊಂಡಿದ್ದು, 16,400 ಅಡಿಗಳಷ್ಟು (5,000 ಮೀಟರ್‍ಗಳು) ಎತ್ತರಕ್ಕೆ ಬಿಸಿ ಬೂದಿಯನ್ನು ಹೊರಹೊಮ್ಮಿಸುತ್ತಿದೆ.

ಇಂದು ಬೆಳಗ್ಗೆ ಅಗ್ನಿಪರ್ವತ ಬಾಯ್ತೆರೆದುಕೊಂಡಿದ್ದು, ಈವರೆಗೆ ಯಾವುದೇ ಸಾವು-ನೋವಿನ ವರದಿಯಾಗಿಲ್ಲ ಎಂದು ಇಂಡೋನೆಷ್ಯಾದ ವಾಲ್ಕ್ಯಾನೋಲಜಿ ಅಂಡ್ ಜಿಯೋಲಾಜಿಕಲ್ ಹಜಾರ್ಡ್ ಮಿಟಿಗೇಷನ್ ಸೆಂಟರ್ ತಿಳಿಸಿದೆ.

ಅಗ್ನಿ ಪರ್ವತದ ಕೇಂದ್ರ ಬಿಂದುವಿನಿಂದ ಐದು ಕಿ.ಮೀ. ದೂರವಿರುವಂತೆ ಮತ್ತು ಲಾವಾರಸದ ಬಗ್ಗೆ ನಿಗಾವಹಿಸುವಂತೆ ಸುತ್ತಮುತ್ತಲ ಗ್ರಾಮಗಳಿಗೆ ಎಚ್ಚರಿಕೆ ನೀಡಲಾಗಿದೆ.

ಅಗ್ನಿಪರ್ವತ ಉಗುಳುತ್ತಿರುವ ದಟ್ಟ ಬಿಸಿ ಬೂದಿಯಿಂದ ಆವೃತವಾದ ಹೊಗೆಯ 20 ಕಿ.ಮೀ. ದೂರದವರೆಗೂ ಅವರಿಸಿದೆ.

Facebook Comments

Sri Raghav

Admin