ಇಂದಿನಿಂದ ಬಿಎಂಟಿಸಿ ವೊಲ್ವೋ ಬಸ್ ಸೇವೆ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.3-ಬೆಂಗಳೂರು ಮಹಾನಗರ ಸಾರಿಗೆ ಸಂಸಯು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಗರದ ವಿವಿಧ ಭಾಗಗಳಿಂದ ಹವಾನಿಯಂತ್ರಿತ ವೊಲ್ವೋ ಬಸ್ ಸೇವೆ ಯನ್ನು ಇಂದಿನಿಂದ ಆರಂಭಿಸಿದೆ.

ಕೋವಿಡ್-19 ಹರಡುವಿಕೆ ತಡೆಯಲು ಲಾಕ್‍ಡೌನ್ ಜಾರಿ ಮಾಡಿದ ನಂತರ ವೊಲ್ವೋ ಬಸ್ ಸೇವೆ ನಿಲ್ಲಿಸಲಾಗಿತ್ತು. ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣ, ಕೆಂಪೇಗೌಡ ಬಸ್ ನಿಲ್ದಾಣ, ಬನಶಂಕರಿ, ಎಲೆಕ್ಟ್ರಾನಿಕ್ ಸಿಟಿ, ಬಿಟಿಎಂ ಲೇಔಟ್ ನಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹವಾನಿಯಂತ್ರಿ ಬಸ್ ಸೇವೆ ಒದಗಿಸಿದೆ.

ವಿವಿಧ ಐದು ಮಾರ್ಗಗಳಲ್ಲಿ 23 ವಾಯು ವಜ್ರ ಬಸ್ ಸೇವೆ ಒದಗಿಸಲಾಗಿದೆ. ಜೂನ್ ಒಂದರಿಂದ 75 ಹವಾ ನಿಯಂತ್ರಿತ ವಜ್ರ ಬಸ್ ಸೇವೆಯನ್ನು ಆರಂಭಿಸಿತ್ತು.

ಕೆಂಪೇಗೌಡ ಬಸ್ ನಿಲ್ದಾಣದಿಂದ ಹೊಸಕೋಟೆ, ಕಾಡುಗೋಡಿ, ಸರ್ಜಾಪುರ, ಅತ್ತಿಬೆಲೆ, ಹೆಬ್ಬಾಳ, ಎಲೆಕ್ಟ್ರಾನಿಕ್ ಸಿಟಿ, ಬನಶಂಕರಿ, ಐಟಿಪಿಎಲ್ ನಡುವಿನ ಮಾರ್ಗಗಳಲ್ಲಿ ವೊಲ್ವೋ ಬಸ್ ಸಂಚಾರ ಆರಂಭಿಸಿರುವುದಾಗಿ ಬಿಎಂಟಿಸಿ ಪ್ರಕಟಣೆ ತಿಳಿಸಿದೆ.

Facebook Comments