ಎಪಿಕ್ ಕಾರ್ಡ್ ಇದ್ದರೆ ಸಾಲದು, ಮತದಾರರ ಪಟ್ಟಿಯಲ್ಲಿ ಹೆಸರಿರಲೇಬೇಕು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.21-ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡಲು ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು ಮತ್ತು ಭಾವಚಿತ್ರ ಹೊಂದಿರಬೇಕು. ಚುನಾವಣಾ ಆಯೋಗ ನೀಡಿದ ಎಪಿಕ್(ಇಪಿಐಸಿ) ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿ ಒಂದೇ ಇದ್ದರೆ ಖಾತ್ರಿ ಪಡಿಸಲಾಗುವುದಿಲ್ಲ.

ಕಳೆದ ಜನವರಿ 16ರಂದು ಮತದಾರರ ಅಂತಿಮ ಪಟ್ಟಿ ಪ್ರಕಟಿಸಲಾಗಿದೆ. ಒಟ್ಟು 2,54,55,976 ಪುರುಷರು, 2,48,46,488 ಮಹಿಳೆಯರು, ಇತರೆ 28,996 ಮಂದಿ ಸೇರಿ ಒಟ್ಟು 5,03,07,182 ಮತದಾರರಿದ್ದಾರೆ.

ಜನವರಿ 1, 2019ಕ್ಕೆ 18 ವರ್ಷ ತುಂಬಿದ ಎಲ್ಲಾ ಭಾರತೀಯ ನಾಯಕರು ಮತದಾನದ ಹಕ್ಕು ಪಡೆಯಬಹುದಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‍ಕುಮಾರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 18ರಿಂದ 19 ವರ್ಷದೊಳಗಿನ ಮತದಾರರ ಸಂಖ್ಯೆ 7.21 ಲಕ್ಷ ವಿದೆ. ನಿನ್ನೆವರೆಗೂ 9,31,484 ಹೊಸ ಎಪಿಕ್ ಕಾರ್ಡ್‍ಗಳನ್ನು ಸಿದ್ದಪಡಿಸಲಾಗಿದೆ. ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ 6,97,184 ಕಾರ್ಡ್‍ಗಳನ್ನು ವಿತರಿಸಲಾಗಿದೆ ಎಂದರು.

ಫೆ.23, 24 ಮತ್ತು ಮಾರ್ಚ್ 2 ಮತ್ತು 3 ರಂದು ವಿಶೇಷ ಕ್ಯಾಂಪ್‍ಗಳಲ್ಲಿ ಗುರುತಿನ ಚೀಟಿ ಗುರುತಿಸಲಾಗಿದ್ದು, ಈಗಾಗಲೇ 6.35 ಲಕ್ಷ ಅರ್ಹ ಮತದಾರರನ್ನು ನೋಂದಾಯಿಸಲಾಗಿದೆ. ಅಂತಿಮ ಮತದಾರರ ಪಟ್ಟಿಯಲ್ಲಿ 7.12 ಲಕ್ಷ ಯುವ ಮತದಾರರಿದ್ದಾರೆ ಎಂದು ವಿವರಿಸಿದರು.

ಮೃತಪಟ್ಟಿರುವುದು, ಬೇರೆಡೆಗೆ ಬದಲಾವಣೆ ಸೇರಿದಂತೆ ಇನ್ನಿತರೆ ಕಾರಣಗಳಿಂದ 7.52 ಲಕ್ಷ ಮತದಾರರನ್ನು ಪಟ್ಟಿಯಿಂದ ಕೈ ಬಿಡಲಾಗಿದೆ ಎಂದು ಹೇಳಿದರು.

Facebook Comments

Sri Raghav

Admin