ಮತದಾನ ಮಾಡುವವರಿಗೆ ಅರ್ಧ ಕೆಜಿ ಬೇಳೆ..!

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಏ.17-ನಾಳೆ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಿದವರಿಗೆ ಅರ್ಧ ಕೆಜಿ ತೊಗರಿ ಬೇಳೆ ನೀಡಿ ಪ್ರೋತ್ಸಾಹಿಸುವ ವಿನೂತನ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಹಮ್ಮಿಕೊಳ್ಳಲಾಗಿದೆ.

ಕೃಪಾ ಫುಡ್ಸ್ ಇಂಡಿಯಾ ತೊಗರಿ ಬೇಳೆ ಹಾಗೂ ತೊಗರಿ ಬೇಳೆ ಗಿರಣಿ ಉದ್ಘಾಟನಾ ಸಮಾರಂಭದ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ಮತದಾನ ಮಾಡಿ ಬಂದವರಿಗೆ ಅರ್ಧ ಕೆಜಿ ಪ್ಯಾಕೆಟ್ ತೊಗರಿ ಬೇಳೆ ವಿತರಿಸಲಾಗುತ್ತದೆ.

ಮತದಾನ ಪ್ರಮಾಣ ಹೆಚ್ಚಿಸಲು ಸರ್ಕಾರ ಸೇರಿದಂತೆ ವಿವಿಧ ಸಂಘಸಂಸ್ಥೆಗಳು ವಿಭಿನ್ನ ರೀತಿಯ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದರೊಂದಿಗೆ ಕೈಜೋಡಿಸಿರುವ ಕೃಪಾ ಫುಡ್ಸ್ ಇಂಡಿಯಾ ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ಮತದಾನ ಜಾಗೃತಿ ಅಭಿಯಾನದ ಜೊತೆಗೆ ಅನಾಥ ಆಶ್ರಮದ ಮಕ್ಕಳಿಗೆ ಉಚಿತ ದಾಸೋಹ ಹಮ್ಮಿಕೊಳ್ಳಲಾಗಿತ್ತು.

ಗಿರಣಿಯಲ್ಲಿ ಬೇಳೆ ಬೇರ್ಪಟ್ಟ ನಂತರ ಬರುವ ತೌಡನ್ನು ಸಿದ್ದಗಂಗಾ ಮಠದ ಗೋಶಾಲೆಗೆ ಉಚಿತವಾಗಿ ವಿತರಿಸಲಾಗುವುದು ಎಂದು ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಬಸವರಾಜ್ ತಿಳಿಸಿದ್ದಾರೆ. ಇದರೊಂದಿಗೆ ಸ್ಥಳೀಯರಿಗೆ ಶೇ.50ರಷ್ಟು ಉದ್ಯೋಗವನ್ನು ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

Facebook Comments