ವೋಟ್ ಮಾಡಲು ಅಮೆರಿಕದಿಂದ ಬಂದ ಟೆಕ್ಕಿ..!

ಈ ಸುದ್ದಿಯನ್ನು ಶೇರ್ ಮಾಡಿ

ಕೊಪ್ಪಳ, ಏ.23-ಕಡ್ಡಾಯ ಮತದಾನ ಮಾಡುವಂತೆ ಸರ್ಕಾರಗಳು, ಸಂಘ-ಸಂಸ್ಥೆಗಳು ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೂ ಸಹ ಕೆಲವರು ತಮ್ಮ ಹಕ್ಕುಗಳನ್ನು ಚಲಾಯಿಸಲು ನಿರಾಸಕ್ತಿ ತೋರುವವರಿಗೆ ಮಾದರಿ ಎಂಬಂತೆ ವ್ಯಕ್ತಿಯೊಬ್ಬ ಸಾವಿರಾರು ಕಿಲೋಮಿಟರ್ ದೂರದ ದೇಶ ಅಮೆರಿಕಾದಿಂದ ಬಂತು ತನ್ನ ಹಕ್ಕನ್ನು ಚಲಾಯಿಸಿದ್ದಾರೆ.

ಅಮೆರಿಕದಲ್ಲಿ ಸಾಫ್ಟ್‍ವೇರ್ ಉದ್ಯೋಗಿಯಾಗಿರುವ ಅಭಿಷೇಕ್ ಪಾಟೀಲ್ ಎಂಬ ವ್ಯಕ್ತಿ ತನ್ನ ಹಕ್ಕು ಚಲಾಯಿಸಲೇಬೇಕೆಂದು ತಾಯ್ನಾಡಿಗೆ ಬಂದು ಮತ ಚಲಾಯಿಸಿದ್ದಾರೆ.

ಕಾರಟಗಿ ತಾಲೂಕಿನ ಯರಡೋಣ ಗ್ರಾಮದ ಮತಗಟ್ಟೆ ಸಂಖ್ಯೆ 138ರಲ್ಲಿ ಮತದಾನ ಮಾಡುವ ಮೂಲಕ ನನ್ನ ಕರ್ತವ್ಯ ನಾನು ನಿರ್ವಹಿಸಿದ್ದೇನೆ. ಎಲ್ಲರೂ ತಪ್ಪದೇ ನಿಮ್ಮ ಕರ್ತವ್ಯ ನಿರ್ವಹಿಸಿ. ತಪ್ಪದೇ ಮತದಾನ ಹಬ್ಬದಲ್ಲಿ ಪಾಲ್ಗೊಳ್ಳಿ ಎಂದು ಮನವಿ ಮಾಡಿದರು.

ಹೆತ್ತಮ್ಮನ ಸಾವಿನ ದುಃಖದಲ್ಲೂ ಮತ ಚಲಾಯಿಸಿದ ಮಗ..! : ಹಸೆ ಮಣೆ ಏರುವ ಮುನ್ನ ಮಧು ಮಕ್ಕಳು ಮತದಾನ ಮಾಡಿ ಪ್ರಜಾಪ್ರಭುತ್ವ ಮೌಲ್ಯ ಗಟ್ಟಿಗೊಳಿಸಿದ್ದರು. ಅದೇ ರೀತಿ ದಕ್ಷಿಣ ಕನ್ನಡದಲ್ಲಿ ಹೆರಿಗೆಗೂ ಮುನ್ನ ಗರ್ಭಿಣಿಯೊಬ್ಬಳು ಮತದಾನ ಮಾಡಿದ್ದಳು.

ಇದೀಗ ತಾಯಿ ಸತ್ತ ನೋವಿನಲ್ಲೂ ಮಗ ಮತದಾನ ಮಾಡುವ ಮೂಲಕ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. 2ನೇ ಹಂತದ ಮತದಾನ ಇಂದು ಬೆಳಗ್ಗೆ 7 ಗಂಟೆಯಿಂದ ಪ್ರಾರಂಭವಾಯಿತು.

ಇಂದು ಮುಂಜಾನೆ ಹುಬ್ಬಳ್ಳಿಯ ಮಡಿವಾಳ ನಗರದ ನಿವಾಸಿಗಳಾದ ಸಿ.ಎನ್. ನಾಯಕ ಅವರ ತಾಯಿ ವಿಮಾಲಾ ನಾಯಕ(89) ಕೊನೆಯುಸಿರೆಳೆದರು. ಅಂಕೋಲಾದಲ್ಲಿ ವಾಸಿಸುತ್ತಿದ್ದ ತಾಯಿಯ ಸಾವಿನ ಸುದ್ದಿ ಬರಸಿಡಿಲಿನಂತೆ ಬಂದೆರಗಿತು.

ಆದರೆ ಸಿ.ಎನ್.ನಾಯಕ್ ಹಾಗೂ ಅವರ ಪತ್ನಿ ಇಂದಿರಾ ನಾಯಕ ಸಾವಿನ ನೋವಿನಲ್ಲೂ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾವಣೆ ಮಾಡಿ ಅಂತ್ಯಸಂಸ್ಕಾರಕ್ಕೆ ಅಂಕೋಲಾಕ್ಕೆ ತೆರಳಿದರು. ಈ ಮೂಲಕ ಭಾರತೀಯ ಪ್ರಜೆಯ ಜವಾಬ್ದಾರಿ ಮೆರೆದರು.

Facebook Comments