ಕಡ್ಡಾಯ ಮತದಾನಕ್ಕೆ ಜಿಲ್ಲಾಡಳಿತ ವಿನೂತನ ಪ್ರಯತ್ನ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಏ.8- ಸಾರ್ವಜನಿಕರಲ್ಲಿ ಕಡ್ಡಾಯ ಮತದಾನದ ಬಗ್ಗೆ ಅರಿವು ಮೂಡಿಸಲು ಮೈಸೂರು ಜಿಲ್ಲಾಡಳಿತ ವಿನೂತನ ಪ್ರಯತ್ನ ಮಾಡಿದೆ.
ಮೈಸೂರಿನ ಮೃಗಾಲಯದಲ್ಲಿ ಪ್ರವಾಸಿಗರು ಕಾರ್ಟೂನ್ ಮುಂದೆ ಸೆಲ್ಪಿ ತೆಗೆದುಕೊಳ್ಳುವ ಮೂಲಕ ಕಡ್ಡಾಯ ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಮೃಗಾಲಯಕ್ಕೆ ಆಗಮಿಸುವ ಪ್ರತಿಯೊಬ್ಬ ಪ್ರವಾಸಿಗರಿಗೂ ಮತದಾನದ ಬಗ್ಗೆ ಅರಿವು ಮೂಡಿಸಲು ಸೆಲ್ಪಿ ಪಾಯಿಂಟ್‍ಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಅಭಿರಾಮ್ ಜಿ.ಶಂಕರ್ ಅವರು ಚಾಲನೆ ನೀಡಿದರು.

ಚುನಾವಣೆಯಲ್ಲಿ ಅಕ್ರಮ ಕಂಡು ಬಂದರೆ ವಿಡಿಯೋ ಚಿತ್ರೀಕರಿಸಿ ಸಿ-ವಿಶಿಲ್ ಆ್ಯಪ್ ಮೂಲಕ ದೂರು ಕೊಡುವಂತೆ ಅವರು ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.
ಕಾರ್ಟೂನ್ ಮೇಲೆ ಬಲಿಷ್ಠ ಭಾರತ ನಿರ್ಮಾಣಕ್ಕಾಗಿ ಮತದಾನ ಮಾಡೋಣ -ಆಮಿಷಗಳನ್ನು ನಿರಾಕರಿಸಿ ನಿಷ್ಪದಂತೆ ಹಕ್ಕು ಚಲಾಯಿಸಿ ಎಂದು ಘೋಷ ವ್ಯಾಕ್ಯ ಸಾರಲಾಗಿದೆ.

ಇದೇ ವೇಳೆ ಕಡ್ಡಾಯ ಮತದಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಮೈಸೂರು ಜಿಲ್ಲಾ ಸ್ವೀಪ್ ಸಮಿತಿ ಓಟ್ ಇಂಡಿಯಾ ಎಂಬ ವಿಡಿಯೋ ಗೀತೆಯನ್ನು ಪ್ರಸ್ತುತ ಪಡಿಸಿದೆ. ಗಾಯಕ ಶ್ರೀಹರ್ಷ ರಚಿಸಿ ನಿರ್ದೇಶಿಸಿರುವ ಈ ವಿಡಿಯೋವನ್ನು ಜಿ.ಪಂ. ಸಿಇಒ ಜ್ಯೋತಿ ಬಿಡುಗಡೆ ಮಾಡಿದರು.

ಜಿಪಂ ಸಿಇಒ ಕೆ.ಜ್ಯೋತಿ ಮೈಸೂರು ಮೃಗಾಲಯ ಕಾರ್ಯನಿರ್ವಹಕ ನಿರ್ದೇಶಕ ಅಜಿತ್ ಕುಲಕರ್ಣಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ರಾಜು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Facebook Comments