ಕೃಷ್ಣ ಜನ್ಮಾಷ್ಟಮಿಯಂದೇ ಬೃಂದಾವನ ಇಸ್ಕಾನ್ ಟೆಂಪಲ್‍ಗೆ ವಕ್ಕರಿಸಿದ ಕೊರೊನಾ ಪೀಡೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೃಂದಾವನ(ಉ.ಪ್ರ),ಆ.11- ಕೊರೊನಾ ಪೀಡೆಯಿಂದ ಜಗದೋದ್ದಾರಕ ಶ್ರೀಕೃಷ್ಣನ ಗೋಕುಲಾಷ್ಟಮಿಯಂದೇ ಉತ್ತರಪ್ರದೇಶದ ವಿಶ್ವವಿಖ್ಯಾತ ಬೃಂದಾವನ ಇಸ್ಕಾನ್ ಮಂದಿರದಲ್ಲಿ ಸೀಲ್‍ಡೌನ್ ಮಾಡಲಾಗಿದೆ.

ಇಂದು ಮತ್ತು ನಾಳೆ ಶ್ರೀ ಕೃಷ್ಣ ಜನ್ಮಾಷ್ಟಮಿಗಾಗಿ ದೇವಸ್ಥಾನದಲ್ಲಿ ಭರ್ಜರಿ ಸಿದ್ದತೆ ನಡೆದಿತ್ತು. ಈ ಮಧ್ಯೆ ಅರ್ಚಕ ಸೇರಿದಂತೆ 22 ಮಂದಿಗೆ ಕೋವಿಡ್ ಸೋಂಕು ತಗುಲಿದ್ದು, ಇಡೀ ದೇವಸ್ಥಾನವನ್ನು ಮುಚ್ಚಲಾಗಿದೆ.

ಈ ಹಿಂದೆ ಇಸ್ಕಾನ್ ಮಂದಿರದ ಒಬ್ಬರಿಗೆ ಮಾತ್ರ ಸೋಂಕು ತಗುಲಿತ್ತು. ಈಗ 22 ಜನರಿಗೆ ಸಾಂಕ್ರಾಮಿಕ ರೋಗ ಕಾಣಿಸಿಕೊಂಡಿದೆ. ಹೀಗಾಗಿ ಬೃಂದಾವನ ಇಸ್ಕಾನ್ ಟೆಂಪಲ್‍ನ್ನು ಸಂಪೂರ್ಣ ಸೀಲ್‍ಡೌನ್ ಮಾಡಲಾಗಿದೆ ಎಂದು ಉನ್ನತಾಕಾರಿಗಳು ತಿಳಿಸಿದ್ದಾರೆ.

ಸೋಂಕಿತರ ಸಂಪರ್ಕದಲ್ಲಿರುವ ವ್ಯಕ್ತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಎಲ್ಲರನ್ನು ಕ್ವಾರಂಟೈನ್‍ಗೊಳಪಡಿಸಿ ಚಿಕಿತ್ಸೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

Facebook Comments

Sri Raghav

Admin