VX ನರ್ವ್ ಏಜೆಂಟ್ ಎಂಬ ಮಾರಕ ರಾಸಾಯನಿಕದಿಂದ ಕಿಮ್ ಜಾಂಗ್ ನಮ್ ಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Kim-Jong-nam

ಕೌಲಾಲಂಪುರ್, ಫೆ.24-ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರ ಮಲ ಸಹೋದರ ಕಿಮ್ ಜಾಂಗ್ ನಮ್ ಅವರ ಹತ್ಯೆ ಪ್ರಕರಣದ ಬಗ್ಗೆ ಹೊಸ ಸಂಗತಿಗಳು ಬಯಲಾಗುತ್ತಿವೆ. ಕೆಮಿಕಲ್ ವಾರ್‍ಗಳಲ್ಲಿ ಬಳಸುವ ಮಾರಕ ನರ್ವ್ ಏಜೆಂಟ್ ವಿಎಕ್ಸ್‍ನಿಂದ ನಮ್‍ರನ್ನು ಕೊಲೆ ಮಾಡಲಾಗಿದೆ ಎಂದು ಮಲೇಷ್ಯಾ ಪೊಲೀಸರು ತಿಳಿಸಿದ್ಧಾರೆ.
ಕೌಲಾಲಂಪುರ್ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ನಡೆದ ಕಿಮ್ ಹತ್ಯೆ ಕುರಿತ ವರದಿ (ಟಾಕ್ಸಿಕಾಲಜಿ ರಿಪೋರ್ಟ್) ಬಿಡುಗಡೆ ಮಾಡಿದ ಮಲೇಷ್ಯಾ ಪೊಲೀಸರು, ಹಂತಕರು ಬಳಸಿದ ವಿಎಕ್ಸ್ ನರ್ವ್ ಏಜೆಂಟ್ ರಾಸಾಯನಿಕವು ವಾಸನೆ ರಹಿತ, ರುಚಿರಹಿತ ಮತ್ತು ಅಧಿಕ ವಿಷಯುಕ್ತ ರಾಸಾಯನಿಕವಾಗಿದೆ ಎಂದು ಹೇಳಿದ್ದಾರೆ.

ಹತ್ಯೆಯಾದ ಕಿಮ್ ಮುಖ ಮತ್ತು ಕಣ್ಣುಗಳಲ್ಲಿ ಈ ಅಪಾಯಕಾರಿ ರಾಸಾಯನಿಕದ ಅಂಶಗಳು ಪತ್ತೆಯಾಗಿವೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.   ಏರ್‍ಪೋರ್ಟ್‍ನಲ್ಲಿ ಫೆ.13ರಂದು ಕಿಮ್ ಹತ್ಯೆ ನಡೆದಿತ್ತು. ಇಬ್ಬರು ಮಹಿಳೆಯರು ಅವರ ಬಳಿ ಬಂದು ಮುಖಕ್ಕೆ ಏನೋ ಹಾಕಿದ ದೃಶ್ಯಗಳು ಸಿಸಿಟಿವಿ ಫೂಟೇಜ್‍ನಲ್ಲಿ ಕಂಡಬಂದಿವೆ. ಈಗ ಈ ಕೊಲೆ ಪ್ರಕರಣದ ತನಿಖೆ ಮತ್ತಷ್ಟು ತೀವ್ರಗೊಂಡಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin