ಮತ್ತೊಂದು ಗೋಡೆ ಬರಹ : ಕರಾವಳಿಯಲ್ಲಿ ಕಿಡಿಗೇಡಿಗಳಿಂದ ಶಾಂತಿ ಕದಡುವ ಕುಕೃತ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು, ನ.29- ಮಂಗಳೂರಿನ ನಗರದ ಕದ್ರಿ ಬಟ್ಟಗುಡ್ಡೆಯಲ್ಲಿ ಇತ್ತೀಚಿಗೆ ಕಾಣಿಸಿಕೊಂಡ ಉಗ್ರ ಬರಹದ ಬೆನ್ನಲ್ಲೇ ಮತ್ತೊಂದು ಎಚ್ಚರಿಕೆ ಬರಹ ಇಲ್ಲಿನ ಕೋರ್ಟ್ ಬಳಿಯ ಹಳೆ ಪೊಲೀಸ್ ಔಟ್‍ ಪೋಸ್ಟ್ ಗೋಡೆಯಲ್ಲಿ ಕಾಣಿಸಿಕೊಂಡಿದೆ.

ಮಂಗಳೂರಿನ ಕೊಡಿಯಾಲ್ ಬೈಲ್‍ನಲ್ಲಿರುವ ಕೋರ್ಟ್ ಬಳಿಯ ಹಳೆ ಪೊಲೀಸ್ ಔಟ್ ಪೋಸ್ಟ್ ನ ಗೋಡೆಯಲ್ಲಿ ಕಾಣಿಸಿಕೊಂಡಿರುವ ಬರಹವನ್ನು ಕದ್ರಿ ಬಳಿ ಗೋಡೆಯಲ್ಲಿ ಬರೆದಿದ್ದ ತಂಡವೇ ಬರೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಇಲ್ಲಿ ಬರಹವನ್ನು ಉರ್ದು ಭಾಷೆಯ ಪದಗಳನ್ನು, ಇಂಗ್ಲಿಷ್ ಅಕ್ಷರಗಳಲ್ಲಿ ಬರೆಯಲಾಗಿದೆ. ನ.27ರಂದು ಕದ್ರಿ ಬಟ್ಟಗುಡ್ಡೆಯಲ್ಲಿ ಲಷ್ಕರ್ ಜಿಂದಾಬಾದ್ ಎಂದು ಗೋಡೆ ಬರಹ ಬರೆಯಲಾಗಿತ್ತು. ಇದರ ಮರುದಿನ ಕೋರ್ಟ್ ಬಳಿಯ ಪೊಲೀಸ್ ಔಟ್ ಪೋಸ್ಟ್ ಗೋಡೆ ಮೇಲೆ ಈ ಬರಹ ಪತ್ತೆಯಾಗಿದೆ.

ಇವೆರಡೂ ಕೃತ್ಯವನ್ನು ಒಂದೇ ತಂಡ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಇದೀಗ ಈ ಬರಹವನ್ನು ಅಳಿಸಿ ಹಾಕಲಾಗಿದ್ದು, ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕರಾವಳಿ ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಕೋಮು ಗಲಭೆಗಳಿಲ್ಲದೆ ಶಾಂತಿ ವಾತಾವರಣ ನೆಲೆಸಿತ್ತು. ಈ ನಡುವೆ ಗೋಡೆ ಬರಹದ ಮೂಲಕ ಶಾಂತಿ ಕದಡುವ ಹುನ್ನಾರಗಳು ನಡೆದಿವೆ ಎಂಬ ಆರೋಪ ಕೇಳಿಬಂದಿದೆ.

ಕದ್ರಿ ಬಳಿಯ ಗೋಡೆ ಬರಹ ಕಂಡುಬಂದಾಗಲೇ ವ್ಯಾಪಕ ಆಕ್ರೋಶಗಳು ವ್ಯಕ್ತವಾಗಿದ್ದವು. ದುಷ್ಕರ್ಮಿಗಳನ್ನು ಕೂಡಲೇ ಬಂಸಬೇಕು ಎಂಬ ಒತ್ತಾಯ ಕೇಳಿಬಂದಿದ್ದವು. ಉಗ್ರವಾದವನ್ನು ಬೆಂಬಲಿಸಿ ಬರೆಯಲಾಗುತ್ತಿರುವ ಗೋಡೆ ಬರಹಗಳು ಭಾವನಾತ್ಮಕ ಪ್ರಚೋದನೆಗೆ ಕಾರಣವಾಗುತ್ತಿದ್ದು, ಜನಸಾಮಾನ್ಯರನ್ನು ಕೆರಳಿಸುತ್ತಿದೆ.

ಗೋಡೆ ಬರಹದ ಹಿಂದೆ ವ್ಯವಸ್ಥಿತ ಸಂಚಿದೆ. ಇದರ ಹಿಂದಿರುವ ಕಾಣದ ಕೈಗಳನ್ನು ತಕ್ಷಣವೇ ಪತ್ತೆಹಚ್ಚಿ ಬಂಸಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಕದ್ರಿಯಲ್ಲಿ ಗೋಡೆ ಬರಹ ಕಾಣಿಸಿಕೊಂಡಾಗಲೇ ಎಚ್ಚರಿಕೆ ನೀಡಿದ್ದರು. ಅದರ ನಂತರವೂ ಮತ್ತೊಂದು ದುಷ್ಕøತ್ಯ ನಡೆದಿರುವುದು ಕರಾವಳಿಯಲ್ಲಷ್ಟೇ ಅಲ್ಲ, ನಾಡಿನಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ.

Facebook Comments

Sri Raghav

Admin